ಸಮುದ್ರ ತೀರಕ್ಕೆ ಬಂದ ತಿಮಿಂಗಿಲಗಳನ್ನು ವೀಕ್ಷಿಸುತ್ತಿರುವ ಅಧಿಕಾರಿಗಳು ಮತ್ತು ಸ್ಥಳೀಯರು
ದೇಶ
ಚೆನ್ನೈಯಲ್ಲಿ ಸಮುದ್ರ ತೀರಕ್ಕೆ ಬಂದ ತಿಮಿಂಗಿಲಗಳು
ತಮಿಳುನಾಡಿನ ಟುಟಿಕೊರಿನ್ ಸಮುದ್ರ ತೀರಕ್ಕೆ ನೂರಕ್ಕೂ ಹೆಚ್ಚು ತಿಮಿಂಗಿಲಗಳು ನೀರು ಬಿಟ್ಟು ಕಳೆದ ರಾತ್ರಿಯಿಂದ...
ಟುಟಿಕೊರಿನ್: ತಮಿಳುನಾಡಿನ ಟುಟಿಕೊರಿನ್ ಸಮುದ್ರ ತೀರಕ್ಕೆ ನೂರಕ್ಕೂ ಹೆಚ್ಚು ತಿಮಿಂಗಿಲಗಳು ನೀರು ಬಿಟ್ಟು ಕಳೆದ ರಾತ್ರಿಯಿಂದ ಬರುತ್ತಿವೆ.
ಬಂದರು ಅಧಿಕಾರಿಗಳು ಮತ್ತು ಮೀನುಗಾರರು ತೀರಕ್ಕೆ ಬಂದ ಮೀನುಗಳನ್ನು ಮತ್ತೆ ಸಮುದ್ರಕ್ಕೆ ಸೇರಿಸುತ್ತಿದ್ದರೂ ಅವು ಮತ್ತೆ ಬರುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಸಮುದ್ರ ಚೆನ್ನೈಯಿಂದ ಸುಮಾರು 600 ಕಿಲೋ ಮೀಟರ್ ದೂರದಲ್ಲಿವೆ.
ಇವು ಸಣ್ಣ ರೆಕ್ಕೆಗಳಿರುವ ತಿಮಿಂಗಿಲಗಳು. ಅವು ತಮ್ಮ ಹಾದಿ ತಪ್ಪಿರಬಹುದು. ಆದರೆ ಇದೇ ಮೊದಲ ಬಾರಿಗೆ ಇಲ್ಲಿ ತಿಮಿಂಗಿಲಗಳು ಸಮುದ್ರ ತೀರಕ್ಕೆ ಬರುತ್ತಿವೆ. ನಾವು ಈ ಬಗ್ಗೆ ತನಿಖೆ ನಡೆಸಲು ಅರಣ್ಯ ಇಲಾಖೆ ಮತ್ತು ಮನ್ನಾರ್ ಮರೀನ್ ಪಾರ್ಕ್ ಅಧಿಕಾರಿಗಳನ್ನು ಕೇಳಿದ್ದೇವೆ ಎಂದು ಜಿಲ್ಲೆಯ ಹಿರಿಯ ಅಧಿಕಾರಿ ರವಿ ಕುಮಾರ್ ತಿಳಿಸುತ್ತಾರೆ.
ಕಳೆದ ಆಗಸ್ಟ್ ನಲ್ಲಿ ನಾಗಪಟ್ಟಿನಂ ಜಿಲ್ಲೆಯ ಗ್ರಾಮವೊಂದರ ಸಮೀಪವಿರುವ ಸಮುದ್ರ ತೀರದಿಂದ 33 ಅಡಿ ಉದ್ದದ ತಿಮಿಂಗಿಲವೊಂದನ್ನು ಹೊರತೆಗೆಯಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ