1971ರ ಇಂಡೋ ಪಾಕ್ ವಾರ್ ಹೀರೋ ಜಾಕೋಬ್ ನಿಧನ

1971ರ ಬಾಂಗ್ಲಾ ವಿಮೋಚನಾ ಹೋರಾಟದ ಹಿಂದಿನ ಯಶಸ್ಸಿನ ಧೀರ ಯೋಧ ನಿವೃತ್ತ ಲೆಫ್ಟಿನೆಂಟ್ ಜನರಲ್ ಜೆಎಫ್ ಆರ್ ಜಾಕೋಬ್...
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಜೆಎಫ್ ಆರ್ ಜಾಕೋಬ್( ಮೋದಿಯವರ ಟ್ವಿಟ್ಟರ್ ನಲ್ಲಿ ಪ್ರಕಟಗೊಂಡ ಚಿತ್ರ)
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಜೆಎಫ್ ಆರ್ ಜಾಕೋಬ್( ಮೋದಿಯವರ ಟ್ವಿಟ್ಟರ್ ನಲ್ಲಿ ಪ್ರಕಟಗೊಂಡ ಚಿತ್ರ)
Updated on: 

ನವದೆಹಲಿ: 1971ರ ಬಾಂಗ್ಲಾ ವಿಮೋಚನಾ ಹೋರಾಟದ ಹಿಂದಿನ ಯಶಸ್ಸಿನ ಧೀರ ಯೋಧ ನಿವೃತ್ತ ಲೆಫ್ಟಿನೆಂಟ್ ಜನರಲ್ ಜೆಎಫ್ ಆರ್ ಜಾಕೋಬ್ ಬುಧವಾರ ನಿಧನರಾಗಿದ್ದಾರೆ.

ಧೀರ್ಘ ಕಾಲದ ಅಸ್ವಸ್ಥತೆ ನಂತರ ಇಂದು ಬೆಳಗ್ಗೆ ಅವರು ನಿಧನರಾದರು. ಎಂದು ಸೇನಾ ಮೂಲಗಳು ತಿಳಿಸಿವೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. 1971ರ ಭಾರತ ಪಾಕ್ ಯುದ್ಧದಲ್ಲಿ ಢಾಕಾದಲ್ಲಿ ಪಾಕಿಸ್ತಾನಿ ಪಡೆಗಳನ್ನು ಶರಣಾಗುವಂತೆ ಸಂಧಾನ ನಡೆಸಿ ಭಾರತಕ್ಕೆ ಜಯ ತಂದುಕೊಟ್ಟ ಧೀರ ಯೋಧ ಜಾಕೋಬ್ ಅವರು.

ಜಾಕೋಬ್ ಅವರು ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯ ಪೂರ್ವ ಪ್ರಾಂತ್ಯದಲ್ಲಿ ಮೇಜರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಅವರು 1923ರಲ್ಲಿ ಬ್ರಿಟಿಷ್ ಇಂಡಿಯಾದ ಬೆಂಗಾಲ್ ಪ್ರೆಸಿಡೆನ್ಸಿಯಲ್ಲಿ ಜನಿಸಿದ್ದರು. ತಮ್ಮ 19ನೇ ವಯಸ್ಸಿಗೆ ಸೇನೆಗೆ ಸೇರ್ಪಡೆಗೊಂಡಿದ್ದರು. ಅಷ್ಟೇ ಅಲ್ಲ 2ನೇ ವಿಶ್ವ ಯುದ್ಧದಲ್ಲಿಯೂ ಹೋರಾಡಿದ ಕೀರ್ತಿ ಅವರದ್ದಾಗಿದೆ.

1978ರಲ್ಲಿ ಸೇನೆಯಿಂದ ನಿವೃತ್ತಿಯಾಗುವ ಮೊದಲು 1965ರ ಇಂಡೋ ಪಾಕಿಸ್ತಾನ್ ಯುದ್ಧದಲ್ಲಿಯೂ ಭಾಗವಹಿಸಿದ್ದರು. ಜಾಕೋಬ್ ಅವರು ಗೋವಾ ಮತ್ತು ಪಂಜಾಬ್ ನ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಪ್ರಧಾನಿ ಕಂಬನಿ: ಲೆಫ್ಟಿನೆಂಟ್ ಜನರಲ್ ಜಾಕೋಬ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ಸಂದೇಶ ಬರೆದು, ಅವರ ನಿಸ್ವಾರ್ಥ ಸೇವೆಯನ್ನು ಭಾರತ ದೇಶ ಎಂದೆಂದಿಗೂ ಸ್ಮರಿಸುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com