

ಚಂಡೀಗಡ: ದೇಶದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ದೇವರ ಇಚ್ಚೆಯಾಗಿದೆ ಎಂದು ಪಂಜಾಬ್ ಸಚಿವ ಸುರ್ಜಿತ್ ಸಿಂಗ್ ರಾಖ್ರಾ ಹೇಳಿದ್ದಾರೆ.
ಕಳೆದ ವರ್ಷ ಪಂಜಾಬ್ ಉಪಮುಖ್ಯಮಂತ್ರಿಯಾಗಿದ್ದ ಸುಖಬೀರ್ ಸಿಂಗ್ ಬಾದಲ್ ಅವರ ಒಡೆತನದ ಬಸ್ ನಿಂದ ಕೆಲ ದುಷ್ಕರ್ಮಿಗಳು 13 ವರ್ಷದ ಹರ್ಷ್ ದೀಪ್ ಕೌರ್ ಎಂಬಾತನನ್ನು ಚಲಿಸುತ್ತಿದ್ದ ಬಸ್ ನಿಂದ ತಳ್ಳಿದ್ದರು. ಈ ವೇಳೆ ಪ್ರತಿಕ್ರಿಯೆ ನೀಡಿದ್ದ ಸಚಿವ ಸುರ್ಜಿತ್ ಸಿಂಗ್ ರಾಖ್ರಾ ಅದು ಕೂಡ ದೇವರ ಇಚ್ಚೆ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು.
ಆಗ ಮತ್ತೊಮ್ಮೆ ಅಂಥಹುದ್ದೇ ಹೇಳಿಕೆ ನೀಡುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನೊಂದ ಗಾಜಿಸಲಾರ್ ಗ್ರಾಮದ ರೈತನೊಬ್ಬ ತಾನು ಬೆಳೆದಿದ್ದ ಭತ್ತಕ್ಕೆ ಬೆಂಕಿ ಹಚ್ಚಿ ಅದರೊಳಗೆ ತಾನು ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ.