
ನವದೆಹಲಿ: ಅಮೆಜಾನ್ ಆನ್‍ಲೈನ್ ಸರಕು ಮಾರಾಟ ಕಂಪನಿಯ ಮುಖ್ಯಸ್ಥ ಜೆಫ್ರಿ ಪಿ ಬಿಜೋಸ್ ಅವರನ್ನು ಫಾರ್ಚುನ್ ನಿಯತಕಾಲಿಕೆಯಲ್ಲಿ ವಿಷ್ಣುವಿನ ಅವತಾರದಲ್ಲಿ ಚಿತ್ರಿಸಲಾಗಿದ್ದು, ಹಿಂದೂಗಳ ವಿರೋಧಕ್ಕೆ ಕಾರಣ ವಾಗಿದೆ
ಅಮೆಜಾನ್ ಕಂಪನಿಯನ್ನು ಭಾರತದಲ್ಲಿ ಬೇರೂರುವಂತೆ ಜೆಫ್ರಿ ಹಾಕಿಕೊಂಡಿರುವ ಯೋಜನೆ ಕುರಿತು ಫಾರ್ಚುನ್ ನಿಯತಕಾಲಿಕೆ `` ಅಮೆಜಾನ್ ಇನ್ವೇಡ್ಸ್ ಇಂಡಿಯಾ'ಎಂಬ ಶೀರ್ಷಿಕೆಯಡಿ ಲೇಖಲನ ಪ್ರಕಟಿಸಿದೆ ಈ ಲೇಖನಕ್ಕೆ ಪೂರಕವಾಗಿ ಜೆಫ್ರಿ ಅವರನ್ನುವಿಷ್ಣುವಿನ ಅವತಾರದಲ್ಲಿ ಚಿತ್ರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಅವರೂ ಇಂಥದ್ದೇ ವಿವಾದಲ್ಲಿ ಸಿಲುಕಿಕೊಂಡಿದ್ದರು.
Advertisement