ಇಸೀಸ್ ಉಗ್ರ ಸಂಘಟನೆಗೆ ರೊಹಿಂಗ್ಯಾ ಮುಸ್ಲಿಮರ ಕಳ್ಳಸಾಗಣೆ: ಭಾರತದ ನಕಲಿ ಪಾಸ್ ಪೋರ್ಟ್ ಬಳಕೆ

ಮಾನವ ಕಳ್ಳ ಸಾಗಣೆ ಮೂಲಕ ರೊಹಿಂಗ್ಯಾ ಮುಸ್ಲಿಮರ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿಸಲು ಭಾರತದ ಪಾಸ್ ಪೋರ್ಟ್ ಬಳಕೆಯಾಗಿರುವುದು ಬೆಳಕಿಗೆ ಬಂದಿದೆ.
ಇಸೀಸ್ ಉಗ್ರ ಸಂಘಟನೆಗೆ ರೊಹಿಂಗ್ಯಾ ಮುಸ್ಲಿಮರ ಕಳ್ಳಸಾಗಣೆ: ಭಾರತದ ನಕಲಿ ಪಾಸ್ ಪೋರ್ಟ್ ಬಳಕೆ
ಇಸೀಸ್ ಉಗ್ರ ಸಂಘಟನೆಗೆ ರೊಹಿಂಗ್ಯಾ ಮುಸ್ಲಿಮರ ಕಳ್ಳಸಾಗಣೆ: ಭಾರತದ ನಕಲಿ ಪಾಸ್ ಪೋರ್ಟ್ ಬಳಕೆ
Updated on

ನವದೆಹಲಿ: ಮಾನವ ಕಳ್ಳಸಾಗಣೆ ಮೂಲಕ ರೊಹಿಂಗ್ಯಾ ಮುಸ್ಲಿಮರ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿಸಲು ಭಾರತದ ನಕಲಿ ಪಾಸ್ ಪೋರ್ಟ್ ಬಳಕೆಯಾಗಿರುವುದು ಬೆಳಕಿಗೆ ಬಂದಿದೆ.

ದೆಹಲಿಯಲ್ಲಿ ಮಾನವಕಳ್ಳ ಸಾಗಣೆ ಜಾಲ ಪತ್ತೆ ಹಚ್ಚಿರುವ ದೆಹಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ದೊರೆತಿದೆ. ಕಳ್ಳ ಸಾಗಣೆಯಲ್ಲಿ ನಿರತವಾಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದು ವಿಚಾರಣೆಗೊಳಪಡಿಸಿದ್ದಾರೆ. ಐಸಿಸ್ ಉಗ್ರ ಸಂಘಟನೆ ಸೇರಲು ಬಾಂಗ್ಲಾ ದೇಶದ ಮೂಲಕ ಸೌದಿ ಅರೇಬಿಯಾಗೆ ತೆರಳಲು ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.  

ಮ್ಯಾನ್ಮಾರ್‌ನಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ 500ಕ್ಕೂ ಅಕ ರೊಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್‌ನಿಂದ ಸೌದಿ ಅರೇಬಿಯಾಗೆ ಕಳ್ಳಸಾಗಣೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಕಳ್ಳಸಾಗಣೆ ಮಾಡುವುದಕ್ಕಾಗಿ ಭಾರತದ ನಕಲಿ ಪಾಸ್ ಪೋರ್ಟ್ ಗಳನ್ನು ಬಳಸಿಕೊಳ್ಳಲಾಗಿರುವ ಬಗ್ಗೆಯೂ ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com