ತಿಮಿಂಗಿಲಗಳ ಸಾವು 73ಕ್ಕೇರಿಕೆ

ತಮಿಳುನಾಡಿನ ಟ್ಯುಟಿಕಾರನ್ ಕರಾವಳಿಯಲ್ಲಿ ಕಿರು ತಿಮಿಂಗಿಲಗಳ ಸಾವಿನ ಸರಣಿ ಮುಂದುವರಿದಿದೆ...
ತಮಿಳುನಾಡಿನ ಟ್ಯುಟಿಕಾರನ್ ಕರಾವಳಿಯಲ್ಲಿ ಮೃತಪಟ್ಟಿರುವ ತಿಮಿಂಗಲಗಳು
ತಮಿಳುನಾಡಿನ ಟ್ಯುಟಿಕಾರನ್ ಕರಾವಳಿಯಲ್ಲಿ ಮೃತಪಟ್ಟಿರುವ ತಿಮಿಂಗಲಗಳು
ಟ್ಯುಟಿಕಾರನ್: ತಮಿಳುನಾಡಿನ ಟ್ಯುಟಿಕಾರನ್ ಕರಾವಳಿಯಲ್ಲಿ ಕಿರು ತಿಮಿಂಗಿಲಗಳ ಸಾವಿನ ಸರಣಿ ಮುಂದುವರಿದಿದೆ.
ಗುರುವಾರ ಮತ್ತೆ 28  ತಿಮಿಂಗಿಲಗಳು ದಡಕ್ಕೆ ಬಂದು ಸಾವನ್ನಪ್ಪಿದ್ದು, ಸತ್ತ ಕಡಲಜೀವಿಗಳ ಸಂಖ್ಯೆ ಮೂರೇ ದಿನದಲ್ಲಿ 73ಕ್ಕೇರಿವೆ. 
ದಡಕ್ಕೆ ಬಂದ ತಿಮಿಂಗಿಲಗಳನ್ನು ಮತ್ತೆ ಸಮುದ್ರಕ್ಕೆ ಕಳುಹಿಸಲು ವನ್ಯಜೀವಿ ವಾರ್ಡನ್ ಗಳು, ಮೀನುಗಾರರು, ಕರಾವಳಿ ರಕ್ಷಕ ಪಡೆಗಳು ಎಷ್ಟೇ ಪ್ರಯತ್ನಿಸಿದರೂ, ಬುಧವಾರ ಮಧ್ಯರಾತ್ರಿಯ ವೇಳೆ ಮತ್ತಷ್ಟು ತಿಮಿಂಗಿಲಗಳು ದಡಕ್ಕೆ ಬಂದು ಸಾವಿಗೀಡಾಗಿವೆ ಎಂದು ಅವರು ಹೇಳಿದ್ದಾರೆ.
ಈ ಬಗೆಗಿನ ಹೆಚ್ಚಿನ ತನಿಖೆಗಾಗಿ ಮೃತ ತಿಮಿಂಗಿಲದ ದೇಹದ ಮಾದರಿಯನ್ನು ಡೆಹ್ರಾಡೂನ್‍ನ ವನ್ಯಜೀವಿ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com