ಶಬರಿಮಲೈ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದ ವಕೀಲನಿಗೆ 500 ಬೆದರಿಕೆ ಕರೆ!

ಶಬರಿಮಲೈ ದೇವಾಲಯಕ್ಕೆ ಪ್ರವೇಶಕ್ಕೆ ಮಹಿಳೆಯರಿಗೂ ಅನುವು ಮಾಡಿಕೊಡಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ವಕೀಲನಿಗೆ 500ಕ್ಕೂ ಅಧಿಕ ಬೆದರಿಕೆ ಕರೆಗಳು ಬಂದಿವೆ
ಶಬರಿಮಲೈ (ಸಂಗ್ರಹ ಚಿತ್ರ)
ಶಬರಿಮಲೈ (ಸಂಗ್ರಹ ಚಿತ್ರ)

ತಿರುವನಂತಪುರ: ಖ್ಯಾತ ಧಾರ್ಮಿಕ ಕ್ಷೇತ್ರ ಶಬರಿಮಲೈ ದೇವಾಲಯಕ್ಕೆ ಪ್ರವೇಶಕ್ಕೆ ಮಹಿಳೆಯರಿಗೂ ಅನುವು ಮಾಡಿಕೊಡಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ವಕೀಲನಿಗೆ 500ಕ್ಕೂ ಅಧಿಕ  ಬೆದರಿಕೆ ಕರೆಗಳು ಬಂದಿವೆ.

ತಮ್ಮ ಮನೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಬಂದಿದ್ದು, ಕೂಡಲೇ ಅರ್ಜಿ ವಾಪಸ್ ಪಡೆಯಬೇಕೆಂದು ಬೆದರಿಕೆ ಹಾಕಿದವರು ಒತ್ತಾಯಿಸಿದ್ದಾರೆ ಎಂದು  ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಶನ್(ಐವೈಎಲ್ಎ) ಅಧ್ಯಕ್ಷರಾಗಿರುವ ನೌಶಾದ್ ಅಹ್ಮದ್ ಖಾನ್ ಹೇಳಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಿರುವುದು ಅಸಾಂವಿಧಾನಿಕ ಎಂದು ಅಭಿಪ್ರಾಯಪಟ್ಟಿತ್ತು. ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರಿಂದ ನೌಶಾದ್ ಅಹ್ಮದ್ ಖಾನ್ ಅವರಿಗೆ ಭದ್ರತೆ ಒದಗಿಸಲಾಗಿದ್ದು,  ಹೆಚ್ಚಿನ ಭದ್ರತೆ ಬಗ್ಗೆ ಸೋಮವಾರ ನಿರ್ಧರಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com