
ನವದೆಹಲಿ: ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಎರಡನೇ ಪೂರ್ಣ ಬಜೆಟ್‍ನ್ನು ಫೆ.29ರಂದು ಮಂಡಿಸಲಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಲಿದ್ದು, ಇದರ ಹಿಂದಿನ ದಿನ ದೇಶದ ಹಣಕಾಸು ಪರಿಸ್ಥಿತಿ ವರದಿ ಮಂಡಿಸಲಿದ್ದಾರೆ. ವಿತ್ತೀಯ ಕೊರತೆ ಗುರಿ, ಹಣದುಬ್ಬರ ನಿಯಂತ್ರಣ, ಆರ್ಥಿಕ ಪ್ರಗತಿ ಕಾಯ್ದುಕೊಳ್ಳುವುದು, ಸರ್ಕಾರಿ ವೆಚ್ಚ ಹೆಚ್ಚಳ ಸೇರಿದಂತೆ ಹಲವಾರು ಪ್ರಮುಖ ಸವಾಲುಗಳು ಹಣಕಾಸು ಸಚಿವರ ಮುಂದಿದೆ. ಪ್ರಧಾನಿ ಮೋದಿ ಸೇರಿದಂತೆ ಹಣಕಾಸು ಸಚಿವರು ಸಂಬಂಧಪಟ್ಟ ಎಲ್ಲರೊಂದಿಗೂ ಬಜೆಟ್ ಪೂರ್ವ ಸಮಾಲೋಚನೆಗಳನ್ನು ಕೈಗೊಂಡಿದ್ದಾರೆ.
Advertisement