
ಮುಂಬೈ: ಮುಂಬೈನಲ್ಲಿ ಆಯೋಜಿಸಲಾಗಿದ್ದ ಮ್ಯಾರಥಾನ್ನಲ್ಲಿ 104ರ ಅಜ್ಜ ಫೌಜಾ ಸಿಂಗ್ ಪಾಲ್ಗೊಂಡು ನವೋಲ್ಲಾಸದಿಂದ ಓಡಿದರು.
‘ಟರ್ಬೆನ್ಡ್ ಟಾರ್ನೆಡೋ’ ಎಂದೇ ಖ್ಯಾತರಾಗಿರುವ ಫೌಜಾ ಸಿಂಗ್ ಲಂಡನ್ನಲ್ಲಿ ನೆಲೆಸಿದ್ದು, ಭಾನುವಾರ ಮುಂಬೈನಲ್ಲಿ ಆಯೋಜಿಸಲಾಗಿದ್ದ ಮ್ಯಾರಥಾನ್ನಲ್ಲಿ ಪಾಲ್ಗೊಂಡು, ಸ್ಪರ್ಧಿಗಳಿಗೆ ಸ್ಪೂರ್ತಿ ತುಂಬಿದರು. ಇವರು ಮ್ಯಾರಥಾನ್ನಲ್ಲಿ ಪಾಲ್ಗೊಳ್ಳುತ್ತಿರುವ ಅತಿ ಹಿರಿಯ ಸ್ಪರ್ಧಿ ಎಂಬ ಗೌರವಕ್ಕೂ ಪಾತ್ರರಾದರು.
2ನೇ ಬಾರಿ ಮುಂಬೈ ಮ್ಯಾರಥಾನ್ನಲ್ಲಿ ಪಾಲ್ಗೊಂಡಿರುವುದು ನನಗೆ ಸಂತಸ ತಂದಿದೆ. ಮ್ಯಾರಥಾನ್ ಆಯೋಜನೆ ಮಾಡಿದವರಿಗೆ ನನ್ನ ಧನ್ಯವಾದಗಳು. ನಾನು ವಿಶ್ವದೆಲ್ಲೆಡೆ ಮ್ಯಾರಥಾನ್ನಲ್ಲಿ ಓಡಿ ಪ್ರಶಸ್ತಿ ಪಡೆದಿದ್ದೇನೆ. ಭಾರತದಲ್ಲಿ ಸಹೃದಯರ ಹೃದಯವನ್ನು ಗೆಲ್ಲಲು ಬಂದಿದ್ದೇನೆ ಎಂದು ಫೌಜಾ ಸಿಂಗ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
Advertisement