ಅಲ್ ಖೈದಾ ನಂಟು: ದೆಹಲಿ ಪೊಲೀಸರಿಂದ ಹರ್ಯಾಣದಲ್ಲಿ ಶಂಕಿತನ ಸೆರೆ

ಉಗ್ರ ಸಂಘಟನೆ ಅಲ್ ಖೈದಾ ಜತೆ ನಂಟು ಹೊಂದಿರುವ ಆರೋಪದ ಮೇರೆಗೆ ಹರ್ಯಾಣದ ಮೇವಾತ್ ಜಿಲ್ಲೆಯಲ್ಲಿ ಶಂಕಿತ ಉಗ್ರನೊಬ್ಬನನ್ನು ದೆಹಲಿ ಪೊಲೀಸರು...
ಬಂಧನ
ಬಂಧನ

ನವದೆಹಲಿ: ಉಗ್ರ ಸಂಘಟನೆ ಅಲ್ ಖೈದಾ ಜತೆ ನಂಟು ಹೊಂದಿರುವ ಆರೋಪದ ಮೇರೆಗೆ ಹರ್ಯಾಣದ ಮೇವಾತ್ ಜಿಲ್ಲೆಯಲ್ಲಿ ಶಂಕಿತ ಉಗ್ರನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆಂಬ ಶಂಕೆ ಹಿನ್ನಲೆ ದೆಹಲಿ ಪೊಲೀಸರು ಇಲ್ಲಿವರೆಗೂ ಐವರನ್ನು ಬಂಧಿಸಿದ್ದಾರೆ. ಬಂಧಿತನನ್ನು 32 ವರ್ಷದ ಅಬ್ದುಲ್ ಸಮಿ ಎಂದು ಗುರುತಿಸಲಾಗಿದ್ದು, ಇಂದು ಕೋರ್ಟ್ ಮುಂದು ಹಾಜರುಪಡಿಸಲಾಗಿತ್ತು. ಕೋರ್ಟ್ ಶಂಕಿತ ಉಗ್ರನನ್ನು ಫೆಬ್ರವರಿ 1ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಪೊಲೀಸ್ ವಿಶೇಷ ಆಯುಕ್ತ(ವಿಶೇಷ ಘಟಕ) ಅರವಿಂದ್ ದೀಪ್ ಹೇಳಿದ್ದಾರೆ.

ಅಬ್ದುಲ್ ಸಮಿ ಜಾರ್ಖಂಡ್ ನ ಜೆಮ್ ಶೇಡ್ ಪುರ ನಿವಾಸಿಯಾಗಿದ್ದು, ಭಾರತೀಯ ಉಪಖಂಡದಲ್ಲಿ ಅಲ್ ಖೈದಾದ ಭಾಗವಾಗಿ ಪ್ರಮುಖ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ ಖೈದಾ ಪರ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಶಿಕ್ಷಕ ಮೌಲಾನ ಅನ್ಜರ್ ಶಹಾ ಎಂಬಾತನನ್ನು ಜನವರಿ 6 ರಂದು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com