ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು
ದೇಶ
ಭಾರತರತ್ನಕ್ಕೆ ಎನ್ ಟಿಆರ್ ಅಲ್ಲದೆ ಇನ್ಯಾರು ಅರ್ಹ?
ಟಿಡಿಪಿ ಸ್ಥಾಪಕಾಧ್ಯಕ್ಷ ಮತ್ತು ಆಂಧ್ರದ ಮಾಜಿ ಸಿಎಂ ಎನ್ ಟಿ ರಾಮರಾವ್ ಅವರದ್ದು ``ಬಹು ಮುಖ ವ್ಯಕ್ತಿತ್ವ'' ಎಂದು ಬಣ್ಣಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, ``ಎನ್‍ಟಿಆರ್ ಅವರು...
ನವದೆಹಲಿ: ಟಿಡಿಪಿ ಸ್ಥಾಪಕಾಧ್ಯಕ್ಷ ಮತ್ತು ಆಂಧ್ರದ ಮಾಜಿ ಸಿಎಂ ಎನ್ ಟಿ ರಾಮರಾವ್ ಅವರದ್ದು ``ಬಹು ಮುಖ ವ್ಯಕ್ತಿತ್ವ'' ಎಂದು ಬಣ್ಣಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, ``ಎನ್‍ಟಿಆರ್ ಅವರು ಭಾರತರತ್ನಕ್ಕೆ ಅರ್ಹರಲ್ಲ ಎಂದಾದರೆ, ಯಾರು ಕೂಡ ಆ ಪ್ರಶಸ್ತಿಗೆ ಅರ್ಹರಾಗರು,'' ಎಂದಿದ್ದಾರೆ.
ದೆಹಲಿಯಲ್ಲಿ ಸೋಮವಾರ ಮಾತನಾಡಿದ ಸಚಿವ ಗಜಪತಿ ರಾಜು, ``ಬಡತನದಿಂದ ಮೇಲೇಳಲು ಸಾಧ್ಯವಾ ಗದೇ ಇದ್ದಂತಹ ತೆಲುಗರಿಗೆ ಸಹಾಯ ಮಾಡಿದವರು, ರಾಜಕೀಯ ಶಕ್ತಿ ನೀಡಿದ ವರು ಎನ್‍ಟಿಆರ್. ಇವರು ಭಾರತರತ್ನಕ್ಕೆ ಅರ್ಹರಲ್ಲ ಎಂದಾದರೆ, ಇನ್ಯಾರೂ ಅದಕ್ಕೆ ಅರ್ಹರಾಗುವುದಿಲ್ಲ,'' ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ