ಭಾರತಕ್ಕೆ ಬಂದಿದ್ದ ನೂರು ಸಿರಿಯನ್ನರು ನಾಪತ್ತೆ..!

ಸಿರಿಯಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತಕ್ಕೆ ವಲಸೆ ಬಂದಿದ್ದ ಸುಮಾರು 100 ಸಿರಿಯನ್ನರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ...
ಸಿರಿಯಾ ನಿರಾಶ್ರಿತರು (ಸಂಗ್ರಹ ಚಿತ್ರ)
ಸಿರಿಯಾ ನಿರಾಶ್ರಿತರು (ಸಂಗ್ರಹ ಚಿತ್ರ)

ನವದೆಹಲಿ: ಸಿರಿಯಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತಕ್ಕೆ ವಲಸೆ ಬಂದಿದ್ದ ಸುಮಾರು 100 ಸಿರಿಯನ್ನರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ವಲಸೆ ಬಂದಿರುವ ವಿದೇಶಿಗರ ಕುರಿತಂತೆ ಸರ್ಕಾರಿ ಏಜೆನ್ಸಿಗಳು ನಡೆಸಿದ ಪರಿಶೀಲನೆ ವೇಳೆ ಈ ಅಂಶ ಬೆಳಕಿಗೆ ಬಂದಿದ್ದು, ನಾಪತ್ತೆಯಾದವರಿಗಾಗಿ ಶೋಧ ನಡೆಯಸಲಾಗುತ್ತಿದೆ. 2015ರಲ್ಲಿ  ಭಾರತಕ್ಕೆ ಆಗಮಿಸಿದ್ದ ಸಿರಿಯನ್ನರು ವೀಸಾ ಅವಧಿಗಿಂತ ಹೆಚ್ಚಿನ ಸಮಯ ಭಾರತದಲ್ಲಿದ್ದಿದ್ದು ಮತ್ತು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೀಸಾ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ ಸರ್ಕಾರಿ ಏಜೆನ್ಸಿಗಳು ಸಾಮಾನ್ಯದಂತೆ ಪರಿಶೀಲನೆ ಮಾಡುತ್ತಿದ್ದ ವೇಳೆ ಈ ಅಂಶ ಬಹಿರಂಗವಾಗಿದ್ದು, 100 ಸಿರಿಯನ್ನರು ಅವಧಿಗಿಂತ ಹೆಚ್ಚು  ಸಮಯ ಭಾರತದಲ್ಲಿ ನೆಲೆಸಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ನಾಪತ್ತೆಯಾದವರ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಸಿರಿಯಾದಲ್ಲಿ ಐಸಿಸ್ ಉಗ್ರರ ದಾಳಿ ತೀವ್ರವಾಗಿದ್ದ ಸಂದರ್ಭದಲ್ಲಿ ಅಲ್ಲಿಂದ ಚಿಕಿತ್ಸೆ, ಪ್ರವಾಸ ಮುಂತಾದ ಕಾರಣಗಳಿಗಾಗಿ ಸಿರಿಯನ್ನರು ಭಾರತಕ್ಕೆ ಆಗಮಿಸಿದ್ದರು. ಕೇಂದ್ರ ಸರ್ಕಾರ ಇವರಿಗೆ 6 ದಿನದಿಂದ 6 ತಿಂಗಳ ಅವಧಿಯ ವೀಸಾಗಳನ್ನು ವಿತರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com