
ಬೆಂಗಳೂರು: ಐಬಿಎಂ ಸಂಸ್ಥೆಯ ನೌಕರರೊಬ್ಬರ ಹತ್ಯೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಬೆಂಗಳೂರಿನ ಆಗ್ನೇಯ ಭಾಗದ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿರುವ ಕುಸುಮ್ ಸಿಂಗ್ಲ(31 ವರ್ಷ) ಅವರು ಮೊನ್ನೆ ಮಂಗಳವಾರ ಕೆಲಸ ಮುಗಿಸಿ ಸಾಯಂಕಾಲ ಮನೆಗೆ ಬಂದ ನಂತರ ಅವರು ಸಾವಿಗೀಡಾಗಿರುವುದು ಪಕ್ಕದ ಫ್ಲ್ಯಾಟಿನಲ್ಲಿ ವಾಸಿಸುತ್ತಿದ್ದವರಿಂದ ತಿಳಿದುಬಂತು. ಲ್ಯಾಪ್ ಟಾಪ್ ನ ವಯರ್ ನಿಂದ ಕತ್ತು ಹಿಸುಕಿ ಸಾಯಿಸಲಾಗಿತ್ತು.
ಕೊಲೆ ಪ್ರಕರಣದ ಜಾಡು ಹಿಡಿದು ಹೊರಟ ಬೆಂಗಳೂರು ಪೊಲೀಸರು ಇಂದು ಬೆಳಗ್ಗೆ ಹರ್ಯಾಣದಲ್ಲಿ ಸುಖ್ ಬೀರ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಸುಖ್ ಬೀರ್ ಸಿಂಗ್ ಮತ್ತು ಕುಸುಮ್ ಸಿಂಗ್ಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಪರಿಚಯರಾಗಿದ್ದರು. ಮುಖತಃ ಗೊತ್ತಿರಲಿಲ್ಲ ಎಂದು ಬೆಂಗಳೂರು ಪೊಲೀಸ್ ಅಧಿಕಾರಿ ಪಿ.ಹರಿಶೇಖರನ್ ತಿಳಿಸಿದ್ದಾರೆ.
ಸಿಂಗ್ಲ ಕೊಲೆಯಾಗುವ ದಿನ ಮಂಗಳವಾರ ಸುಖ್ ಬೀರ್ ನನ್ನು ತನ್ನ ಫ್ಲಾಟ್ ಗೆ ಕರೆದಿದ್ದಾಳೆ. ಆಕೆಯ ಮನೆಗೆ ಬಂದ ಆತ ಹಣದ ಬೇಡಿಕೆಯಿಟ್ಟಿದ್ದಾನೆ. ಆಕೆ ಹಣ ಕೊಡಲು ನಿರಾಕರಿಸಿದಾಗ ಇಬ್ಬರ ನಡುವೆ ಜಗಳವಾಗಿದೆ. ಆಗ ಸುಖ್ ಬೀರ್ ವಯರ್ ನಿಂದ ಆಕೆಯ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಅಪಾರ್ಟ್ ಮೆಂಟಿನ ಸಿಸಿಟಿವಿ ಕ್ಯಾಮೆರಾದಲ್ಲಿ ಚಿತ್ರ ಸರಿಯಾಗಿ ಮೂಡಿ ಬರದಿದ್ದರಿಂದ ಸಾಮಾಜಿಕ ಜಾಲತಾಣದ ಮೂಲಕ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಸಿಂಗ್ಲ ಬೆಂಗಳೂರಿಗೆ ಬಂದು ನೆಲೆಸಿದ್ದರು.
Advertisement