ಇತಾರ್ಸಿ: ತಾಜ್ ಮಹಲ್ ನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಶಂಕಿತ ಉಗ್ರ ತಮಿಳುನಾಡು ಪೊಲೀಸರ ವಶದಿಂದ ಪರಾರಿಯಾಗಿದ್ದಾನೆ.
ಪ್ರಕರಣವೊಂದರ ವಿಚಾರಣೆ ಸಂಬಂಧ ಪ್ರೊಡಕ್ಷನ್ ವಾರೆಂಟ್ ಆಧಾರದಲ್ಲಿ ತಮಿಳುನಾಡು ಪೊಲೀಸರು ಶಂಕಿತ ಉಗ್ರ ಸಯೀದ್ ಅಹ್ಮದ್ ನನ್ನು(38 ) ತಮಿಳುನಾಡಿನ ವೆಲ್ಲೂರಿನಿಂದ ಲಖನೌ ಗೆ ಕರೆದೊಯ್ಯಲಾಗುತ್ತಿದ್ದಾಗ ಮಧ್ಯಪ್ರದೇಶದ ಇತಾರ್ಸಿ ರೈಲು ನಿಲ್ದಾಣದ ಬಳಿ ಪರಾರಿಯಾಗಿದ್ದಾನೆ ಎಂದು ಹೋಷಂಗಾಬಾದ್ ಎಸ್ ಪಿ ಅಶುತೋಶ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳ ವಶದಿಂದ ಪರಾರಿಯಾಗಿರುವ ಶಂಕಿತ ಉಗ್ರ ತಮಿಳುನಾಡಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿ 2015 ರ ಅಕ್ಟೋಬರ್ ನಲ್ಲಿ ತಮಿಳುನಾಡು ಪೊಲೀಸರಿಂದ ಬಂಧನಕ್ಕೊಳಗಾಗಿದ್ದ.
Advertisement