ಕಾಶ್ಮೀರದಲ್ಲಿ ಇಸಿಸ್ ಜಾಲ ವಿಸ್ತರಣೆ..!

ಪಾಕಿಸ್ತಾನ ಮತ್ತು ಭಾರತ ದೇಶಗಳ ನಡುವಿನ ವಿವಾದಕ್ಕೆ ಕಾರಣವಾಗಿರುವ ಕಾಶ್ಮೀರದಲ್ಲಿ ಇಸಿಸ್ ಉಗ್ರ ಸಂಘಟನೆಯ ಜಾಲ ವಿಸ್ತರಿಸಲು ಇದು ಉತ್ತಮ ಸಮಯವೆಂದು ಇಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಾಕಿಸ್ತಾನ ಮತ್ತು ಭಾರತ ದೇಶಗಳ ನಡುವಿನ ವಿವಾದಕ್ಕೆ ಕಾರಣವಾಗಿರುವ ಕಾಶ್ಮೀರದಲ್ಲಿ ಇಸಿಸ್ ಉಗ್ರ ಸಂಘಟನೆಯ ಜಾಲ ವಿಸ್ತರಿಸಲು ಇದು ಉತ್ತಮ ಸಮಯವೆಂದು ಇಸಿಸ್  ಉಗ್ರ ಸಂಘಟನೆ ಹೇಳಿಕೊಂಡಿದೆ.

ಕಾಶ್ಮೀರ ವಿವಾದವನ್ನು ಮುಂದಿಟ್ಟುಕೊಂಡು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐ, ಉಗ್ರ ಸ೦ಘಟನೆಗಳನ್ನು ಸ್ವ೦ತ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದೆ. ಕಾಶ್ಮೀರ ವಿವಾದದಲ್ಲಿ ಐಎಸ್ ಐ  ಅನಗತ್ಯವಾಗಿ ಮೂರು ತೂರಿಸುತ್ತಿದ್ದು, ತನ್ನ ಹಿಸಾಸಕ್ತಿ ಸಾಧನೆಗಾಗಿ ಲಷ್ಕರ್ ಎ ತೊಯ್ಬಾ, ಆಫ್ಘನ್ ತಾಲಿಬಾನ್ ಮತ್ತಿತರ ಉಗ್ರ ಸ೦ಘಟನೆಗಳು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಉಗ್ರ  ಸಂಘಟನೆಗಳು ಕೂಡ ಪಾಕಿಸ್ತಾನದ ಗುಪ್ತಚರ ಸ೦ಸ್ಥೆ ಐಎಸ್‍ಐನ ನಿದೇ೯ಶನದ೦ತೆ ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾನೆ.

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖವಾಣಿ ಇಂಗ್ಲಿಷ್ ನಿಯತಕಾಲಿಕೆ ದಬಿಕ್‍ಗೆ ಸ೦ದಶ೯ನ ನೀಡಿರುವ ಹಫೀಜ್ ಸಹೀದ್ ಖಾನ್, ಪಾಕಿಸ್ತಾನದ ಐಎಸ್ ಐ ಸಂಸ್ಥೆ ನಿಜಕ್ಕೂ ಉಗ್ರ  ಸಂಘಟನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ತನ್ನ ಸ್ವಹಿತಾಸಕ್ತಿ ಸಾಧನೆಗಾಗಿ ಉಗ್ರಗಾಮಿ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಅಲ್ಲದೆ ಕಾಶ್ಮೀರ ಜನತೆಯ ಪ್ರತಿಭಟನಾ  ಮನೋಭಾವವನ್ನು ಕೂಡ ಐಎಸ್ ಐ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಕಾಶ್ಮೀರ ಜನತೆಯ ಉತ್ಸಾಹವನ್ನು ತನ್ನ ಸ್ವಕಾರ್ಯಕ್ಕೆ ಬಳಸಿಕೊಳ್ಳುತ್ತಿದೆ. ಐಎಸ್ ಐಗೆ ಅಲ್ಲಿನ ಮುಸ್ಲಿಮರ ಹಿತಾಸ್ತಕ್ತಿ  ಬಗ್ಗೆಯಾಗಲಿ ಅಥವಾ ಅಲ್ಲಿ ಅಲ್ಲಾಹ್ ಕಾನೂನು ಸ್ಥಾಪಿಸುವ ಬಗ್ಗೆ ಒಲವಿಲ್ಲ. ಹೀಗಾಗಿ ಕಾಶ್ಮೀರದಲ್ಲಿ ಇಸಿಸ್ ಸಂಘಟನೆಯನ್ನು ವಿಸ್ತರಿಸಲು ಇದು ಉತ್ತಮ ಅವಕಾಶ ಎಂದು ಹೇಳಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com