ದಟ್ಟ ಮಂಜು
ದಟ್ಟ ಮಂಜು

ದೆಹಲಿ ಸೇರಿ ಉತ್ತರ ಭಾರತದಲ್ಲಿ ಹಿಮಪಾತ: ವಿಮಾನ, ರೈಲು ಸೇವೆ ಸ್ಧಗಿತ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಮಪಾತವಾಗುತ್ತಿದೆ. ಶೀತಗಾಳಿಗೆ ಜನಜೀವನ ಅಸ್ತವ್ಯಸ್ತ...

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಮಪಾತವಾಗುತ್ತಿದೆ. ಶೀತಗಾಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಅತಿಯಾಗಿ ಹಿಮಪಾತವಾಗುತ್ತಿರುವುದರಿಂದ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ದೆಹಲಿ ,ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ಉತ್ತರ ಭಾರತದಾಧ್ಯಂತ ತೀವ್ರ ಚಳಿಯ ವಾತಾವರಣ ಕಂಡು ಬಂದಿದೆ.

ಹಿಮಪಾತವಾಗುತ್ತಿರುವುದರಿಂದ ದಟ್ಟ ಮಂಜು ಕವಿದಿದ್ದು, ವಿಮಾನ ಹಾರಾಟ ಸ್ಧಗಿತಗೊಂಡಿದೆ. ಇನ್ನು 20 ರೈಲುಗಳನ್ನು ರದ್ದು ಮಾಡಲಾಗಿದೆ. 135 ಕ್ಕೂ ಹೆಚ್ಚು ರೈಲುಗಳ ಸಂಚಾರ ಸಮಯವನ್ನು ಬದಲಾವಣೆ ಮಾಡಲಾಗಿದೆ.

ದೆಹಲಿಯಲ್ಲಿ ಭಾನುವಾರ ಬೆಳಗ್ಗೆ 5 ಗಂಟೆಯ ವೇಳೆಗೆ 5 ಡಿಗ್ರಿ ಸೆಲ್ಸಿಯಸ್‌ ಕನಿಷ್ಟ ಉಷ್ಣಾಂಶ ದಾಖಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com