ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್
ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್

ಉಗ್ರ ವಿರೋಧಿ ಹೋರಾಟದಲ್ಲಿ ಭಾರತ-ಫ್ರಾನ್ಸ್ ಜೊತೆಗೂಡುತ್ತದೆ: ಪ್ರಧಾನಿ ಮೋದಿ

ಮಾನವೀಯತೆಯ ಶತ್ರುಗಳಾದ ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತ ಎಂದಿಗೂ ಫ್ರಾನ್ಸ್ ಜೊತೆಗೂಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ...

ಚಂಡೀಘಡ: ಮಾನವೀಯತೆಯ ಶತ್ರುಗಳಾದ ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತ ಎಂದಿಗೂ ಫ್ರಾನ್ಸ್ ಜೊತೆಗೂಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಚಂಡೀಘಡದಲ್ಲಿ ನಡೆಯುತ್ತಿರುವ ಭಾರತ-ಫ್ರಾನ್ಸ್ ವ್ಯವಹಾರಿಕ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಪ್ಯಾರಿಸ್ ಮೇಲೆ ಉಗ್ರರು ದಾಳಿ ಮಾಡಿದಾಗಲೇ ನಾನು  ಫ್ರಾನ್ಸ್ ಅಧ್ಯಕ್ಷರನ್ನು ಗಣರಾಜ್ಯೋತ್ಸವದ ಅತಿಥಿಯಾಗಿ ಆಹ್ವಾನಿಸಲು ನಿರ್ಧರಿಸಿದ್ದೆ. ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಭಾರತ ಎಂದಿಗೂ ಫ್ರಾನ್ಸ್ ಜೊತೆಗಿರುತ್ತದೆ. ಭಾರತ ಮತ್ತು  ಫ್ರಾನ್ಸ್ ದೇಶಗಳು ಒಗ್ಗೂಡಿ ಭಯೋತ್ಪಾದನೆ ವಿರುದ್ಧ ಹೋರಾಡಲಿ ಎಂದು ಹೇಳಿದರು.

ಕೇವಲ ಶಸ್ತ್ರಾಸ್ತ್ರಗಳಿಂದ ಮಾತ್ರ ಭಯೋತ್ಪಾದನೆ ಸಾಧ್ಯವಿಲ್ಲ. ಒಂದು ಕೊಠಡಿಯಲ್ಲಿ ಕುಳಿತು ಅಭದ್ರತೆ ಸೃಷ್ಟಿಸಲು ಕೆಲವರು ಸಂಚು ಹೆಣೆಯುತ್ತಿದ್ದಾರೆ. ಆದರೆ ಆ ಸಂಚು ಸಫಲವಾಗಲು  ಉಭಯ ದೇಶಗಳು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಕಿಡಿಕಾರಿದರು. ಇದೇ ವೇಳೆ ಫ್ರಾನ್ಸ್ ನ ರಕ್ಷಣಾ ವಲಯವನ್ನು ಕೊಂಡಾಡಿದ ಮೋದಿ, ರಕ್ಷಣಾ ಸಾಮಾಗ್ರಿಗಳ ಉತ್ಪಾದನೆಯಲ್ಲಿ  ಫ್ರಾನ್ಸ್ ದೇಶ ಮೇಲುಗೈ ಸಾಧಿಸಿದೆ. ಫ್ರಾನ್ಸ್ ದೇಶದ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಭಾರತ ದೇಶ ಸಿದ್ಧವಿದೆ. ಕೇವಲ ರಾಜತಾಂತ್ರಿಕ ವಿಚಾರದಲ್ಲಿ ಮಾತ್ರವಲ್ಲದೇ ಮೂಲ ಸೌಕರ್ಯದಲ್ಲೂ  ಫ್ರಾನ್ಸ್ ಭಾರತಕ್ಕೆ ಸಾಥ್ ನೀಡಲಿದೆ. ಇಂದು ಸೈಬರ್ ಸೆಕ್ಯೂರಿಟಿ ಬಹಳ ಮುಖ್ಯವಾಗಿದ್ದು, ಭಾರತದೊಂದಿಗೆ ಫ್ರಾನ್ಸ್ ಕೈಜೋಡಿಸಿದರೆ ಯಶಸ್ಸು ಸಾಧಿಸಬಹುದು ಎಂದು ಪ್ರಧಾನಿ ಮೋದಿ  ಹೇಳಿದರು.

ಭಾರತದಲ್ಲಿ ಹೂಡಿಕೆ ಮಾಡುವಂತೆ ಫ್ರಾನ್ಸ್ ಸಿಇಒಗಳಿಗೆ ಪ್ರಧಾನಿ ಆಹ್ವಾನ
ಇದೇ ವೇಳೆ ತಮ್ಮ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾ ಕುರಿತು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರು, ವ್ಯವಹಾರಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ನೂರಾರು ಫ್ರಾನ್ಸ್  ದೇಶದ ಸಿಇಒ ಗಳಿಗೆ ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದರು. ಈ ಹಿಂದೆ ವಿದೇಶಿ ಸಂಸ್ಥೆಗಳು ಭಾರತದಲ್ಲಿ ಹೂಡಿಕೆ ಮಾಡಲು ತೆರಿಗೆ ವಿಚಾರ ದೊಡ್ಡ ಸಮಸ್ಯೆಯಾಗಿತ್ತು.  ಆದರೆ ಭವಿಷ್ಯದಲ್ಲಿ ಆ ವಿಚಾರ ದೊಡ್ಡ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

Related Stories

No stories found.

Advertisement

X
Kannada Prabha
www.kannadaprabha.com