ಸೌದಿ ಅರೇಬಿಯಾದಲ್ಲಿ ಮೋಸ ಹೋದ ಕರ್ನಾಟಕದ ಮಹಿಳೆ

ಉತ್ತಮ ಸಂಬಳ ಸಿಗುವ ಕೆಲಸ ಕೊಡಿಸುವುದಾಗಿ ನಂಬಿಸಿ ಸೌದಿ ಅರೇಬಿಯಾಕ್ಕೆ ಹೋಗಿ ಮೋಸ ಹೋಗಿರುವ ಮಹಿಳೆಯ...
ರುಕ್ಮಿಣಿ ಪವಾರ್ ಮತ್ತು ಪುತ್ರ ಆಕಾಶ್
ರುಕ್ಮಿಣಿ ಪವಾರ್ ಮತ್ತು ಪುತ್ರ ಆಕಾಶ್

ಬೆಂಗಳೂರು: ಉತ್ತಮ ಸಂಬಳ ಬರುವ ಕೆಲಸ ಕೊಡಿಸುವುದಾಗಿ ನಂಬಿಸಿ ಸೌದಿ ಅರೇಬಿಯಾಕ್ಕೆ ಹೋಗಿ ಮೋಸ ಹೋಗಿರುವ ಮಹಿಳೆಯ ದಯನೀಯ ಸ್ಥಿತಿ ಇದು.

ವಿಧವೆ ರುಕ್ಮಿ ಣಿ ಪವಾರ್ (57 ವರ್ಷ) ಹುಬ್ಬಳ್ಳಿಯ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ಸೌದಿ ಅರೇಬಿಯಾಕ್ಕೆ ಹೋದರೆ ಅಲ್ಲಿ ಒಳ್ಳೆಯ ಕೆಲಸ ಮತ್ತು ಕೈ ತುಂಬಾ ಸಂಬಳ ಸಿಗಬಹುದು ಎಂಬ ಯಾರದೋ ಮಾತಿಗೆ ನಂಬಿ ಮುಂಬೈಯ ಏಜೆಂಟರ ಮೂಲಕ 2014, ಜೂನ್ 10 ರಂದು ಸೌದಿ ಅರೇಬಿಯಾಕ್ಕೆ ಹೋಗಿದ್ದಾರೆ. ಅಲ್ಲಿ ಅಲ್ ಶಫಕ್ಕ ಅರಬಿಯಾ ಎಂಬ ಕಂಪೆನಿಯಲ್ಲಿ ಮೂರು ತಿಂಗಳು ಕೆಲಸ ಮಾಡಬೇಕೆಂದು ಕಂಪೆನಿಯ ಅಧಿಕಾರಿಗಳು ಹೇಳಿದ್ದು, ತಿಂಗಳಿಗೆ 20 ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಭರವಸೆ ನೀಡಿದ್ದರು.

ಆದರೆ ಸ್ವಲ್ಪ ದಿನಗಳು ಕಳೆದ ಬಳಿಕ ಅಲ್ಲಿನ ನರಕ ಜೀವನ ರುಕ್ಮಿಣಿ ಪವಾರ್ ಗೆ ಗೊತ್ತಾಗತೊಡಗಿತು. ಕೆಲಸ ಮಾಡುತ್ತಿದ್ದ ಜಾಗದಲ್ಲಿ ಮೇಲಾಧಿಕಾರಿಗಳು ದೈಹಿಕ ಹಿಂಸೆ ನೀಡಲಾರಂಭಿಸಿದರು. ಒಂದು ತಿಂಗಳ ಸಂಬಳ ಕೂಡ ನನ್ನ ಅಮ್ಮನಿಗೆ ನೀಡಲಿಲ್ಲ. ಸರಿಯಾಗಿ ಹೊಟ್ಟೆಗೆ ಊಟ ತಿಂಡಿ ನೀಡುತ್ತಾರೆಯೇ, ಇಲ್ಲವೇ ಎಂಬ ಸಂಶಯ ನಮಗೆ ಬರುತ್ತಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಮುಂದೆ ತಮ್ಮ ಅನಿಸಿಕೆ ಹಂಚಿಕೊಂಡರು ರುಕ್ಮಿಣಿಯವರ ಕಿರಿಯ ಮಗ ಆಕಾಶ್.

ಇದೀಗ ರುಕ್ಮಿಣಿಯವರ ವೀಸಾದ ಅವಧಿಯೂ ಮುಗಿದಿದೆ. ಹೇಗಾದರೂ ಮತ್ತೆ ತಾಯ್ನಾಡಿಗೆ ಮರಳಿ ಬಂದರೆ ಸಾಕು ಅಂತ ಹೊತೊರೆಯುತ್ತಿದ್ದಾರೆ ರುಕ್ಮಿಣಿ ಮತ್ತು ಅವರ ಮಕ್ಕಳು. ಈ ಮಧ್ಯೆ ಅಂದು ಸೌದಿಗೆ ಕಳುಹಿಸಿದ ಏಜೆಂಟರು ಕೂಡ ಸಂವಹನಕ್ಕೆ ಸರಿಯಾಗಿ ಸಿಗುತ್ತಿಲ್ಲ. ಮುಂಬೈಯ ಅಧಿಕಾರಿಗಳನ್ನು ಮತ್ತು ಏಜೆಂಟರನ್ನು ಭೇಟಿ ಮಾಡಲು ನಾವು ಇದುವರೆಗೆ ಸುಮಾರು 1 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ. ಏನೂ ಪ್ರಯೋಜನವಾಗಿಲ್ಲ. ಇದೀಗ ಕೊ ನೆಯ ಪ್ರಯತ್ನವಾಗಿ ರುಕ್ಮಿಣಿಯ ಮಕ್ಕಳು ವಿದೇಶಾಂಗ ಸಚಿವಾಲಯಕ್ಕೆ ಅರ್ಜಿ ಬರೆಯಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಯಾರದ್ದಾದರೂ ಸಚಿವರ ಸಹಾಯ ಸಿಗಬಹುದೇ ಎಂದು ನಿರೀಕ್ಷಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com