ಗಣರಾಜ್ಯೋತ್ಸವದ ಅತಿಥಿ ಹೊಲಾಂಡ್ ಗೆ ಪ್ರಧಾನಿ ಸ್ವಾಗತ

ಜನವರಿ 26 ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಆಗಮಿಸಿರುವ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲ್ಯಾಂಡ್‌ ಅವರನ್ನು ಭಾನುವಾರ ಪ್ರಧಾನಿ ಮೋದಿ ಚಂಡೀಘಡದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು...
ಫ್ರಾನ್ಸ್ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ (ಚಿತ್ರಕೃಪೆ: ಟ್ವಿಟ್ಟರ್)
ಫ್ರಾನ್ಸ್ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ (ಚಿತ್ರಕೃಪೆ: ಟ್ವಿಟ್ಟರ್)

ಚಂಡೀಘಡ: ಜನವರಿ 26 ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಆಗಮಿಸಿರುವ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲ್ಯಾಂಡ್‌  ಅವರನ್ನು ಭಾನುವಾರ ಪ್ರಧಾನಿ ಮೋದಿ ಚಂಡೀಘಡದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.

ಭಾನುವಾರ ಸಂಜೆ ಸುಮಾರು 4.15ರ ಹೊತ್ತಿಗೆ ಚಂಡೀಘಡದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಮತ್ತು ಫ್ರಾನ್ಸ್ ನಿಯೋಗವನ್ನು  ಪಂಜಾಬ್‌ ಮತ್ತು ಹರಿಯಾಣ ಗವರ್ನರ್‌ ಕಪ್ತಾನ್‌ ಸಿಂಗ್‌ ಸೋಲಂಕಿ ಅವರು ಮತ್ತು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸ್ವಾಗತಿಸಿದರು. ಈ ವೇಳೆ ಸರ್ಕಾರದ  ಹಿರಿಯ ಅಧಿಕಾರಿಗಳು ಹಾಜರಿದ್ದರು. ಬಳಿಕ ಚಂಢೀಘಡದ ಖ್ಯಾತ ರಾಕ್ ಗಾರ್ಡನ್ ಗೆ ಆಗಮಿಸಿದ ಹೊಲಾಂಡ್ ರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು.  ಗಣರಾಜ್ಯೋತ್ಸವದ ವಿಶೇಷ ಅತಿಥಿಯಾಗಿ ಆಗಮಿಸಿರುವ ಹೊಲಾಂಡ್ ಅವರು ಇನ್ನೂ 3 ದಿನಗಳ ಕಾಲ ಭಾರತದಲ್ಲೇ ಉಳಿಯಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com