ಸಾಂದರ್ಭಿಕ ಚಿತ್ರ
ದೇಶ
ಕಾಶ್ಮೀರದಲ್ಲಿ ಎಲ್ ಇಟಿ ಉಗ್ರನ ಬಂಧನ
ಲಷ್ಕರ್-ಇ-ತೋಯ್ಬಾ ಸಂಘಟನೆಯ ಉಗ್ರನೊಬ್ಬನನ್ನು ಕಾಶ್ಮೀರದಲ್ಲಿ ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸ್...
ಶ್ರೀನಗರ: ಲಷ್ಕರ್-ಇ-ತೋಯ್ಬಾ ಸಂಘಟನೆಯ ಉಗ್ರನೊಬ್ಬನನ್ನು ಕಾಶ್ಮೀರದಲ್ಲಿ ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸಂಜೆ ಕಾಶ್ಮೀರದ ಬದ್ ಗಾಮ್ ನಲ್ಲಿರುವ ಚದೂರ ಪ್ರದೇಶದಲ್ಲಿ ಬಶರತ್ ಅಹ್ಮದ್ ಶಾ ಎಂಬ ಉಗ್ರನನ್ನು ಬಂಧಿಸಲಾಗಿದೆ.
ಬಂಧಿತ ಉಗ್ರನಿಂದ ಎಕೆ ರೈಫಲ್, ಎರಡು ಮ್ಯಾಗಝೀನ್ ಮತ್ತು ಹ್ಯಾಂಡ್ ಗ್ರೈನೇಡನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

