ರೂರ್ಖೀ ಮದರಾಸದಲ್ಲಿ ಮೊಬೈಲ್ ಫೋನ್, ಸಾಮಾಜಿಕ ತಾಣಗಳ ಬಳಕೆ ನಿಷೇಧ

ಹರಿದ್ವಾರದಲ್ಲಿ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ ಹಿನ್ನೆಲೆಯಲ್ಲಿ ರೂರ್ಖೀಯಲ್ಲಿರುವ ಮದರಸಾವೊಂದು ಸಾಮಾಜಿಕ ತಾಣ ಮತ್ತು ಮೊಬೈಲ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ರೂರ್ಖೀ: ಹರಿದ್ವಾರದಲ್ಲಿ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ ಹಿನ್ನೆಲೆಯಲ್ಲಿ ರೂರ್ಖೀಯಲ್ಲಿರುವ ಮದರಸಾವೊಂದು ಸಾಮಾಜಿಕ ತಾಣ ಮತ್ತು ಮೊಬೈಲ್ ಫೋನ್  ಬಳಕೆಗೆ ನಿಷೇಧ ಹೇರಿದೆ.
ಇಮಾಮ್‌ದುಲ್ ಇಸ್ಲಾಂ ಎಂಬ ಮದರಸಾ, ತಮ್ಮ ಆವರಣದಲ್ಲಿ ಇಂಟರ್‌ನೆಟ್ ಬಳಸಬಾರದೆಂದು ಆಜ್ಞೆ ಹೊರಡಿಸಿ ಮದರಸಾದ ಗೋಡೆಯಲ್ಲಿ ಭಿತ್ತಿ ಪತ್ರವನ್ನು ಅಂಟಿಸಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಇಮಾಮ್‌ದುಲ್ ಇಸ್ಲಾಂನ ಮುಖ್ಯಸ್ಥ, ಮದರಸಾದ ಆವರಣದಲ್ಲಿ ಯಾರೊಬ್ಬರೂ ಮೊಬೈಲ್ ಫೋನ್, ಸಾಮಾಜಿಕ ತಾಣಗಳನ್ನು ಬಳಸಬಾರದು ಎಂದು ಆದೇಶಿಸಲಾಗಿದೆ. ಅದೇ ವೇಳೆ ಹೆತ್ತವರು ಮಕ್ಕಳ ಅಂತರ್ಜಾಲದಲ್ಲಿ ಏನು ಮಾಡುತ್ತಿದ್ದಾರೆ ಎಂದು ನಿಗಾವಹಿಸಬೇಕಾಗಿದೆ. ಮಕ್ಕಳು ಉಗ್ರವಾದಿಗಳ ಮಾತಿಗೆ ಮರುಳಾಗಿ ದಾರಿ ತಪ್ಪುವುದು ಬೇಡ ಎಂಬ ಕಾರಣದಿಂದಲೇ ಈ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮದರಸಾಗಳಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂಬ ಆರೋಪದಿಂದ ಮುಕ್ತವಾಗುವ ಸಲುವಾಗಿ ಈ ಮದರಸಾ ಪ್ರಸ್ತುತ ಕ್ರಮ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com