ಕಳೆದ ವರ್ಷ ಈದ್ ಹಬ್ಬದ ಸಂಭ್ರಮದಲ್ಲಿ ಸಿಹಿ ಹಂಚಿಕೊಳ್ಳಲು ಪಾಕ್ ಸೈನಿಕರು ನಿರಾಕರಿಸಿದ್ದರು. ಅದರಂತೆ ಬಿಎಸ್ ಎಫ್ ಯೋಧರು ಕೂಡ, ಪಾಕ್ ಗಡಿ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂದು ಸಿಹಿ ಹಂಚಿಕೊಳ್ಳಲು ಮುಂದಾಗಿರಲಿಲ್ಲ. ಆದರೆ, ಈ ಬಾರಿ ಉಭಯ ದೇಶಗಳ ಭದ್ರತಾ ಸಿಬ್ಬಂದಿಗಳು ಎಲ್ಲವನ್ನು ಮರೆತು ಸಿಹಿ ಹಂಚಿಕೊಂಡು ಗಣರಾಜ್ಯೋತ್ಸವ ದಿನದಂದು ಸಂಭ್ರಮಿಸಿರುವುದು ವಿಶೇಷ.