ಅಷ್ಟೊಂದು ಗುಂಡುಗಳಿಗೆ ನನ್ನ ತಾಯಿ ಅರ್ಹರಾಗಿದ್ದರೇ ಎಂದು ಪ್ರಶ್ನಿಸಿದ್ದ ರಾಜೀವ್

ಮಾಜಿ ಪ್ರಧಾನಿ ಇಂದಿರಾಗಾಂಧಿ ಹತ್ಯೆಯ ಕುರಿತು ಅಭಿಪ್ರಾಯವ್ಯಕ್ತಪಡಿಸಿರುವ ಪ್ರಣಬ್ ಮುಖರ್ಜಿ ಅವರು, ಅಷ್ಟೋಂದು ಗುಂಡಿಟ್ಟು ಕೊಲ್ಲಲ್ಲು ತಮ್ಮ ತಾಯಿ ಅರ್ಹರೇ ಎಂದು ರಾಜೀವ್ ತಮ್ಮನ್ನು ಪ್ರಶ್ನಿಸಿದ್ದರು ಎಂದು ಪ್ರಣಬ್ ಹೇಳಿದ್ದಾರೆ...
ಇಂದಿರಾಗಾಂಧಿ ಅಂತಿಮ ಸಂಸ್ಕಾರದ ವೇಳೆ ರಾಜೀವ್ ಗಾಂಧಿ
ಇಂದಿರಾಗಾಂಧಿ ಅಂತಿಮ ಸಂಸ್ಕಾರದ ವೇಳೆ ರಾಜೀವ್ ಗಾಂಧಿ

ನವದೆಹಲಿ: ಮಾಜಿ ಪ್ರಧಾನಿ ಇಂದಿರಾಗಾಂಧಿ ಹತ್ಯೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಪ್ರಣಬ್ ಮುಖರ್ಜಿ ಅವರು,  ಅಷ್ಟೋಂದು ಗುಂಡಿಟ್ಟು ಕೊಲ್ಲಲ್ಲು ತಮ್ಮ ತಾಯಿ ಅರ್ಹರೇ ಎಂದು ರಾಜೀವ್ ತಮ್ಮನ್ನು ಪ್ರಶ್ನಿಸಿದ್ದರು ಎಂದು ಪ್ರಣಬ್ ಹೇಳಿದ್ದಾರೆ.

ತಮ್ಮ ಟರ್ಬುಲೆಂಟ್ ಇಯರ್ಸ್ ಪುಸ್ತಕದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಪ್ರಣಬ್ ಮುಖರ್ಜಿ ಅವರು, "ಇಂದಿರಾಗಾಧಿ ಸುದ್ದಿ ಹತ್ಯೆಗೀಡಾದ ಸುದ್ದಿ ಕೇಳಿನಾವು (ಪ್ರಣಬ್, ರಾಜೀವ್ ಮತ್ತು ಇತರೆ  ಮುಖಂಡರು) ದೆಹಲಿಗೆ ದೌಡಾಯಿಸಿದೆವು. ಇಂದಿರಾ ದೇಹವನ್ನು 16 ಗುಂಡುಗಳು ಹೊಕ್ಕಿದ್ದವು ಎಂಬ ಸುದ್ದಿ ತಿಳಿದುಬಂತು. ಭಾವೋಧ್ವೇಗಕ್ಕೊಳಗಾದ ರಾಜೀವ್ ನಮ್ಮತ್ತ ತಿರುಗಿ, " ಅವರು  ಅಷ್ಟೋಂದು ಗುಂಡಿಗೆ ಅರ್ಹರಾಗಿದ್ದರೇ ಎಂದು ಪ್ರಶ್ನಿಸಿದರು. ಅವರ ಪ್ರಶ್ನೆ ನಮ್ಮನ್ನು ದಿಗಿಲುಗೊಳಿಸಿತು. ನಾವು ಮೌನ ತಾಳಿದೆವು ಎಂದು ಹೇಳಿದ್ದಾರೆ.

ಸಂಭಾವ್ಯ ಪರಿಣಾಮ ಅಂದಾಜಿಸದೇ ಆಪರೇಷನ್ ಬ್ಲೂಸ್ಟಾರ್
‘1980-84ರ ಅವಧಿ ಪಂಜಾಬ್ ಬಿಕ್ಕಟ್ಟು ಭಾರತದ ರಾಜಕಾರಣವನ್ನು ತೀವ್ರವಾಗಿ ಕಾಡಿದ ಕಾಲ. ಅಕಾಲಿದಳದವರು ಪ್ರಧಾನಿಗೆ 45 ಬೇಡಿಕೆಗಳ ಮನವಿಯನ್ನು ಸಲ್ಲಿಸಿದ್ದರು. ಅದರ ಬೆನ್ನಿಗೇ,  ಆನಂದಪುರ ಸಾಹಿಬ್ ನಿರ್ಣಯದ ಅನುಷ್ಠಾನಕ್ಕೆ ಬೇಡಿಕೆ ಹೆಚ್ಚಾಯಿತು. ಜತೇದಾರ್ ಜಗದೇವ್ ಸಿಂಗ್ ತಲವಂಡಿ ಎಂಬ ನಾಯಕ ಸಿಖ್ಖರ ಹಿತಾಸಕ್ತಿ ಕಾಪಾಡಲು ಸ್ವತಂತ್ರ ರಾಜ್ಯ ಸ್ಥಾಪನೆಯ  ಬೇಡಿಕೆ ಮುಂದಿಟ್ಟ. ಪ್ರಸ್ತಾವಿತ ಖಲಿಸ್ತಾನ ಬೇಡಿಕೆ ಪಂಜಾಬ್ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡುವಂತೆ ಮಾಡಿತು. ಸಿಖ್ ಪ್ರತ್ಯೇಕತಾವಾದಿ ಚಳವಳಿ ಬಿರುಸುಗೊಂಡಿತು. ಇವೆಲ್ಲದವರ  ಪರಿಣಾಮವೇ ಆಪರೇಷನ್ ಬ್ಲೂಸ್ಟಾರ್. ಸಂಭಾವ್ಯ ಪರಿಣಾಮವನ್ನು ಅಂದಾಜಿಸದೇ ಈ ಕಾರ್ಯಾಚರಣೆ ನಡೆಸಲಾಯಿತು. ಆದಾಗ್ಯೂ, ಇಂದಿರಾ ಗಾಂಧಿ ಅವರು ಹೇಳಿದ, ‘ಪ್ರಣಬ್, ನನಗೆ  ಇದರ ಮುಂದಿನ ಪರಿಣಾಮ ಏನು ಅಂತ ಗೊತ್ತಿದೆ’ ಎಂಬ ಮಾತು ಇನ್ನೂ ಕಿವಿಯಲ್ಲಿ ಗುಂಯ್‌ಗುಡುತ್ತಿದೆ. ಅವರು ತಮ್ಮ ಜೀವವನ್ನೇ ಪಣವಾಗಿಟ್ಟಿದ್ದರು. ಹತ್ಯೆಗೀಡಾಗುವ ಎರಡು ದಿನ  ಮೊದಲು, ಒಡಿಶಾದಲ್ಲಿ ಮಾಡಿದ ಭಾಷಣದಲ್ಲಿ ಅದನ್ನವರು ಹೇಳಿದ್ದರು ಕೂಡ’.

80ರ ದಶಕದ ‘ಕೈ’ ಕಮಾಂಡ್: ‘ಜನಸಂಖ್ಯಾ ನಿಯಂತ್ರಣಕ್ಕೆ ಅನುಸರಿಸಬೇಕಾದ ಮಾರ್ಗ, ಅನಕ್ಷರತೆ ನಿವಾರಣೆ ಮತ್ತು ಅರಣ್ಯ ನಾಶ ತಡೆಗೆ ಸಂಜಯ ಗಾಂಧಿ ವ್ಯಕ್ತಪಡಿಸಿದ್ದ ಅಭಿಪ್ರಾಯ, ನಿರ್ಧಾರಗಳ ಉದ್ದೇಶದಲ್ಲಿ ತಪ್ಪಿಲ್ಲ. ಆದರೆ ಅನುಷ್ಠಾನದ್ದೇ ತೊಡಕು. ಧನಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಅವರ ಅಭಿಪ್ರಾಯಗಳೆಲ್ಲವೂ ಉತ್ತಮವಾಗಿದ್ದವು. ತುರ್ತು ಪರಿಸ್ಥಿತಿ ಬಳಿಕ ಅಧಿಕಾರ ಹಿಡಿದ ಜನತಾ ಸರ್ಕಾರ ಪತನವಾದದ್ದಕ್ಕೆ ಮುಖ್ಯ ಕಾರಣ ಸಂಜಯ್ ತಂತ್ರಗಾರಿಕೆ. 1980ರ ದಶಕದಲ್ಲಿ ಕಾಂಗ್ರೆಸ್‌ನ ರಾಜಕೀಯ ರಣತಂತ್ರ ರೂಪಿಸುತ್ತಿದ್ದುದೇ ಸಂಜಯ್’ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com