ಪ್ರಧಾನಿ ಪಟ್ಟಕ್ಕೆ ತಾನು ಸಮರ್ಥನೇ? ಎಂದು ಪ್ರಶ್ನಿಸಿದ್ದ ರಾಜೀವ್

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ಬಳಿಕ ರಾಜೀವ್ ಗಾಂಧಿಗೆ ದೇಶದ ಪ್ರಧಾನಿಯಾಗುವ ಅವಕಾಶ ಒದಗಿಬಂದಿತ್ತಾದರೂ, ಆ ಹುದ್ದೆಗೆ ನಾನು ಅರ್ಹನೇ ಎಂದು ರಾಜೀವ್ ಪ್ರಶ್ನಿಸಿದ್ದರು ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ...
ರಾಜೀವ್ ಗಾಂಧಿ ಮತ್ತು ಪ್ರಣಬ್ ಮುಖರ್ಜಿ (ಸಂಗ್ರಹ ಚಿತ್ರ)
ರಾಜೀವ್ ಗಾಂಧಿ ಮತ್ತು ಪ್ರಣಬ್ ಮುಖರ್ಜಿ (ಸಂಗ್ರಹ ಚಿತ್ರ)
Updated on

ನವದೆಹಲಿ: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ಬಳಿಕ ರಾಜೀವ್ ಗಾಂಧಿಗೆ ದೇಶದ ಪ್ರಧಾನಿಯಾಗುವ ಅವಕಾಶ ಒದಗಿಬಂದಿತ್ತಾದರೂ, ಆ ಹುದ್ದೆಗೆ ನಾನು ಅರ್ಹನೇ ಎಂದು  ರಾಜೀವ್ ಪ್ರಶ್ನಿಸಿದ್ದರು ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ The Turbulent Years- 1980-&1996'  ಪುಸ್ತಕವನ್ನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ರಾಷ್ಟ್ರಪತಿ ಭವನದಲ್ಲಿ ಗುರುವಾರ  ಲೋಕಾರ್ಪಣೆ ಮಾಡಿದರು. 1980-1996 ರ ನಡುವಿನ ತಮ್ಮ ರಾಜಕೀಯ ಜೀವನ ವೃತ್ತಾಂತವನ್ನು ಬಿಡಿಸಿರುವ ಪ್ರಣಬ್ ಪ್ರಧಾನಿ ದೇಗೇರುವ ಮುನ್ನ ರಾಜೀವ್ ಗಾಂಧಿ ಅವರಲ್ಲಿದ್ದ  ತಳಮಳವನ್ನು The Dramatic Decade- The Indira Gandhi Years ಎಂಬ ಜೀವನ ವೃತ್ತಾಂತದ ಮೊದಲ ಸಂಪುಟವನ್ನು 2014ರ ಡಿಸೆಂಬರ್ 11ರಂದು ಹೊರತಂದಿದ್ದೆ. ಎರಡನೇ  ಸಂಪುಟವನ್ನು 2015ರ ಡಿಸೆಂಬರ್ 11ರಂದೇ ಬಿಡುಗಡೆಗೊಳಿಸುವುದಾಗಿ ಅಂದು ಓದುಗರಿಗೆ ಭರವಸೆ ನೀಡಿದೆ. ಆದರೆ, ಈ ಪುಸ್ತಕ ಸ್ವಲ್ಪ ತಡವಾಗಿ ಬಿಡುಗಡೆಯಾಗುತ್ತಿದೆ’ ಎಂದು ಪ್ರಣಬ್  ಮುಖರ್ಜಿ ಹೇಳಿದರು.

‘ಇಂದಿರಾ ಗಾಂಧಿ ನಿಧನಾನಂತರದ ಬೆಳವಣಿಗೆಯಲ್ಲಿ ಅಂದಿನ ರೈಲ್ವೆ ಸಚಿವ ಎಬಿಎ ಘನಿ ಖಾನ್ ಚೌಧರಿ, ಲೋಕಸಭಾ ಸ್ಪೀಕರ್ ಬಲರಾಂ ಜಾಖಡ್ ಮತ್ತು ಇತರೆ ಹಿರಿಯ ಕಾಂಗ್ರೆಸ್  ನಾಯಕರು ಸಭೆ ಸೇರಿದ್ದರು. ಮಧ್ಯಂತರ ಪ್ರಧಾನಿಯನ್ನು ನೇಮಿಸುವ ಬದಲು ಪೂರ್ಣ ಪ್ರಮಾಣದ ಪ್ರಧಾನಿಯನ್ನೇ ಆಯ್ಕೆ ಮಾಡುವ ನಿರ್ಧಾರವನ್ನು ನನಗೆ ತಿಳಿಸಿದರು. ನಾನಾಗ ರಾಜೀವ್  ಗಾಂಧಿ ಜತೆಗೆ ಕೋಲ್ಕತದಿಂದ ನವದೆಹಲಿಗೆ ವಿಮಾನದಲ್ಲಿ ಹಿಂತಿರುಗುತ್ತಿದ್ದೆ. ನಾನು ಕೂಡಲೇ ರಾಜೀವ್‌ಗೆ ಪ್ರಧಾನಿ ಪಟ್ಟ ಅಲಂಕರಿಸುವುದಕ್ಕೆ ಸಿದ್ಧರಾಗುವಂತೆ ತಿಳಿಸಿದೆ. ಆಗ ಅವರು ‘ನಾನು  ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲೆನೆಂದು ನಿಮಗನಿಸುತ್ತಿದೆಯಾ?’ ಎಂದು ಕೇಳಿದರು. ನಾನು, ‘ನಮ್ಮೆಲ್ಲರ ಸಹಕಾರ, ಬೆಂಬಲ ನಿಮಗಿರುತ್ತದೆ’ ಎಂದೆ’.

ಪ್ರಧಾನಿಯಾಗಲು ಬಯಸಿರಲಿಲ್ಲ: ಇಂದಿರಾ ಹತ್ಯೆ ಬಳಿಕ ಪ್ರಧಾನಿಯಾಗಲು ನಾನು ಬಯಸಿದ್ದೆ ಎಂಬ ಸುದ್ದಿ ಸುಳ್ಳು ಹಾಗೂ ಕಪೋಲಕಲ್ಪಿತ. ನಾನು ಪ್ರಧಾನಿಯಾಗಲು ಬಯಸಿರಲಿಲ್ಲ. 1984ರ  ಆ ಸನ್ನಿವೇಶದಲ್ಲಿ ನನ್ನ ಬಗ್ಗೆ ಊಹಾಪೋಹಗಳು ಎದ್ದಿದ್ದವು. ನನಗೆ ಪ್ರಧಾನಿಯಾಗಬೇಕೆಂಬ ಇರಾದೆ ಇತ್ತು. ಮಧ್ಯಂತರವಾಗಿಯಾದರೂ ಪ್ರಧಾನಿ ಹುದ್ದೆ ನಿರ್ವಹಿಸುವ ಕನಸು ನನಗಿತ್ತು  ಎಂಬಿತ್ಯಾದಿ ಸುದ್ದಿ ಹರಡಿತ್ತು. ಸಂಪುಟದಿಂದ ನನ್ನನ್ನು ಕೈ ಬಿಟ್ಟಾಗ ಆಘಾತವಾಯಿತು ಎಂದು ಪ್ರಣಬ್ ಹೇಳಿದ್ದಾರೆ.

ವಿವಾದಾತ್ಮಕವಾದ್ದೇನೂ ಇಲ್ಲ: ಸಂಪುಟದಲ್ಲಿ ವಿವಾದಾತ್ಮಕ ಅಂಶಗಳಿಲ್ಲ. ಪ್ರಣಬ್ ಅವರಿಗೆ ಡೈರಿ ಬರೆಯುವ ಹವ್ಯಾಸವಿದ್ದು, ಜೀವನ ವೃತ್ತಾಂತದ ಈ ಪುಸ್ತಕಗಳಿಗೆ ಇದೇ ಡೈರಿಯೇ ಮುಖ್ಯ  ಆಧಾರ. ಸಾಧ್ಯವಾದಷ್ಟು ರಕ್ಷಣಾತ್ಮಕವಾಗಿಯೇ ಪುಸ್ತಕ ಬರೆದಿದ್ದು, ಹಲವು ವಿಷಯಗಳು ಇನ್ನೂ ರಹಸ್ಯವಾಗಿಯೇ ಉಳಿದಿವೆ ಎನ್ನುವ ಮಾತು ಕೇಳಿಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com