
ಮುಂಬೈ: ಮಹಾರಾಷ್ಟ್ರದ ಶನಿ ಶಿಂಗಣಾಪುರ ದೇಗುಲ ಪ್ರವೇಶ ವಿಚಾರ ಸುದ್ದಿಯಾದ ಬೆನ್ನಲ್ಲೇ ಈಗ ಮುಂಬೈನ ಹಾಜಿ ಅಲಿ ದರ್ಗಾವೂ ಸುದ್ದಿಯಾಗಿದೆ.
ದರ್ಗಾಗೆ ಪ್ರವೇಶ ನಿರ್ಬಂಧಿಸಿರುವುದನ್ನು ವಿರೋಧಿಸಿ ಮುಸ್ಲಿಂ ಮಹಿಳೆಯರು ಗುರುವಾರ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಹಲವು ಮುಸ್ಲಿಂ ಮಹಿಳಾ ಸಂಘಟನೆಗಳು ದರ್ಗಾದ ಮುಂದೆ ಘೋಷಣೆ ಕೂಗುತ್ತಾ ಪ್ರತಿಭಟಿಸಿದವು.
ಮಹಿಳೆಯರ ಮೇಲೆ ನಿರ್ಬಂಧ ಹೇರುತ್ತಿರುವುದು ಧರ್ಮವಲ್ಲ, ಬದಲಿಗೆ ಪುರುಷ ಮನಸ್ಥಿತಿ. ಸಂವಿಧಾನವೂ ನಮಗೆ ಸಮಾನ ಹಕ್ಕುಗಳನ್ನು ನೀಡಿದೆ. ಇಸ್ಲಾಂ ಯಾವತ್ತೂ ಸಂವಿಧಾನವನ್ನು ಬೆಂಬಲಿಸುತ್ತದೆ ಎಂದು ಪ್ರತಿಭಟನಾಕಾರ ಮಹಿಳೆಯರು ತಿಳಿಸಿದ್ದಾರೆ.
Advertisement