ಅಯೋಧ್ಯೆ ಬಾಗಿಲು ತೆಗೆದಿದ್ದು ರಾಜೀವ್ ಸರ್ಕಾರದ ತಪ್ಪು: ಪ್ರಣಬ್ ಮುಖರ್ಜಿ

ಅಯೋಧ್ಯೆಯ ರಾಮದನ್ಮಭೂಮಿ ದೇವಾಲಯ ಪ್ರದೇಶದ ಬಾಗಿಲನ್ನು ತೆರೆದಿದ್ದು, ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ತಪ್ಪು ನಿರ್ಧಾವಾಗಿತ್ತು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿಫ್ರಾಯಪಟ್ಟಿದ್ದಾರೆ...
ರಾಷ್ಟ್ರಪತಿ ಪ್ರಣಬ್ ಮುಖರ್ಜಿ (ಸಂಗ್ರಹ ಚಿತ್ರ)
ರಾಷ್ಟ್ರಪತಿ ಪ್ರಣಬ್ ಮುಖರ್ಜಿ (ಸಂಗ್ರಹ ಚಿತ್ರ)
Updated on

ನವದೆಹಲಿ: ಅಯೋಧ್ಯೆಯ ರಾಮದನ್ಮಭೂಮಿ ದೇವಾಲಯ ಪ್ರದೇಶದ ಬಾಗಿಲನ್ನು ತೆರೆದಿದ್ದು, ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ತಪ್ಪು ನಿರ್ಧಾವಾಗಿತ್ತು ಎಂದು ರಾಷ್ಟ್ರಪತಿ ಪ್ರಣಬ್  ಮುಖರ್ಜಿ ಅಭಿಫ್ರಾಯಪಟ್ಟಿದ್ದಾರೆ.

ಗುರುವಾರ ಬಿಡುಗಡೆಯಾದ ತಮ್ಮ ಕೃತಿ "ಟರ್ಬುಲೆಂಟ್ ಇಯರ್ಸ್: 1980-96 ನಲ್ಲಿ ಈ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. "ಬಾಬರಿ ಮಸೀದಿಯ ಧ್ವಂಸಪಡಿಸಿದ್ದು ಸ್ಪಷ್ಟ ಎರಡು ಬಗೆತವಾಗಿದ್ದು, ಇದು ಭಾರತದ ವರ್ಚಸನ್ನೇ ಸಂಪೂರ್ಣವಾಗಿ ಹಾಳುಮಾಡಿತು. ದೇವಾಲಯದ ಸ್ಥಳದ ಬಾಗಿಲು ಹಾಳುಮಾಡಿತು. ದೇವಾಲಯದ ಸ್ಥಳದ ಬಾಗಿಲು ತೆರಿದಿದ್ದೂ ತಪ್ಪು ಕ್ರಮವೇ. ಇಂತಹ ಕ್ರಮಗಳಿಂದ ಸರ್ಕಾರ ದೂರವಿರಬೇಕಿತ್ತು ಎಂದು ಜನರೇ ಯೋಚಿಸಿದ್ದರು ಎಂದೂ ಪ್ರಣಬ್ ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ಒಂದು ಧಾರ್ಮಿಕ ಕಟ್ಟಡವನ್ನು  ನಾಶಪಡಿಸುವುದು ಸಂವೇದನಾ ಶೂನ್ಯತೆಯನ್ನು ಪ್ರದರ್ಶಿಸಿತು. ಇದು ಮುಸ್ಲಿಮರ ಭಾವನೆಗಳ ಮೇಲೆ ಬರೆ ಎಳೆಯಿತು. ಭಾರತದ ಸಹಿಷ್ಣು, ಬಹುತ್ವದ ವರ್ಚಸನ್ನು ಹಾಳು ಮಾಡಿತು ಮತ್ತು  ರಾಮಮಂದಿರ ನಿರ್ಮಾಣಕ್ಕೆ ಇಟ್ಟಿಗೆಗಳನ್ನು ಸಂಗ್ರಹಿಸುವ ವಿಶ್ವಹಿಂದೂ ಪರಿಷತ್ ನ ಅಭಿಯಾನವು ಕೋಮು ಸಂಘರ್ಷವನ್ನು ಹುಟ್ಟುಹಾಕಿತು ಎಂದು ಪ್ರಣಬ್ ಹೇಳಿದ್ದಾರೆ.

ಬಾಬ್ರಿ ಧ್ವಂಸ ಪ್ರಕರಣ ಪಿವಿಎನ್ ಸರ್ಕಾರದ ವೈಫಲ್ಯ
‘ಅಂದು 1992ರ ಡಿಸೆಂಬರ್ 6. ನಾನು ಬಾಂಬೆಯಲ್ಲಿದ್ದೆ. ನನಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದು ಜೈರಾಮ್ ರಮೇಶ್. ಆಗ ಅವರು ಯೋಜನಾ ಆಯೋಗದಲ್ಲಿ ನನ್ನ ವಿಶೇಷ  ಕರ್ತವ್ಯಾಧಿಕಾರಿಯಾಗಿದ್ದರು. ಮೊದಲು ನನಗೆ ನಂಬಲಾಗಲಿಲ್ಲ. ಅನೇಕರು ಈ ಘಟನೆಗೆ ಪಿವಿಎನ್ ಕಾರಣ ಎಂದು ಆರೋಪಿಸುತ್ತಾರೆ. ಆ ಸಂದರ್ಭದಲ್ಲಿ ನಾನು ಸಚಿವ ಸಂಪುಟದಲ್ಲಿ ಇರಲಿಲ್ಲ.  ಒಂದಂತೂ ಸತ್ಯ. ಬಾಬ್ರಿ ಕಟ್ಟಡ ಸಂರಕ್ಷಿಸುವುದಕ್ಕೆ ಅಗತ್ಯ ಕ್ರಮಗಳನ್ನು ಅಂದಿನ ಕೇಂದ್ರ ಸರ್ಕಾರ ತೆಗೆದುಕೊಂಡಿರಲಿಲ್ಲ. ಈ ಧ್ವಂಸ ತಡೆಯಲಾಗದೇ ಹೋಗಿದ್ದು ಪಿವಿಎನ್ ಸರ್ಕಾರದ  ಬಹುದೊಡ್ಡ ವೈಫಲ್ಯಗಳಲ್ಲಿ ಒಂದು’ಎಂದು ಪ್ರಣಬ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com