

ನವದೆಹಲಿ: ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಕಳೆದ 6 ವರ್ಷಗಳಲ್ಲಿ ಹಿಂಸೆಯ ಪ್ರಮಾಣ ಗಣನೀಯವಾಗಿ ಇಳಿಮುವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ಇಂತಹ ರಾಜ್ಯಗಳಲ್ಲಿ ಸುಮಾರು 1 ಲಕ್ಷದಷ್ಟು ಅರೆಸೇನಾಪಡೆ ಯೋಧರು ನಿಯೋಜಿತರಾಗಿದ್ದಾರೆ. ಆಂಧ್ರ, ಬಿಹಾರ, ಛತೀಸ್ ಗಡ, ತೆಲಂಗಾಣ ಸೇರಿ ನಕ್ಸಲ್ ಪೀಡಿತ 10 ರಾಜ್ಯಗಳಲ್ಲಿ ಕಳೆದ ವರ್ಷ 1,088ರಷ್ಟು ಹಿಂಸಾತ್ಮಕ ಘಟನೆಗಳು ಸಂಭವಿಸಿದ್ದು, 226 ಮಂದಿ ಸಾವಿಗೀಡಾಗಿದ್ದಾರೆ. 2010ರಲ್ಲಿ 1,005 ಮಂದಿ, 2011ರಲ್ಲಿ 611 ಮಂದಿ, 2014ರಲ್ಲಿ 310 ಮಂದಿ ಮೃತಪಟ್ಟಿದ್ದರು.
ಒಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಕ್ಸಲ್ ಹಿಂಸೆ ಕಡಿಮೆಯಾಗಿದ್ದು, ಭದ್ರತಾ ಪಡೆಗಳ ಮೇಲಿನ ದಾಳಿಯೂ ಇಳಿಮುಖವಾಗಿದೆ ಎಂದೂ ಇಲಾಖೆ ಮಾಹಿತಿ ನೀಡಿದೆ.