ಸೌಹಾರ್ದ ಚರ್ಚೆ ಸ್ಥಾಪನೆಗೆ ಸರ್ವಭಾಷಾ ಸಂವಾದ ಶುರು

ದೇಶದಲ್ಲಿ ಸೌಹಾರ್ದಯುತ ಸಾರ್ವಜನಿಕ ಚರ್ಚೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಗುಜರಾತ್ ನ ನವಸಾರಿಯಲ್ಲಿ ಹೊಸ ವೇದಿಕೆಯೊಂದು...
ಗೋವಿಂದ ಪಾನ್ಸರೆ- ನರೇಂದ್ರ ದಾಭೋಲ್ಕರ್- ಎಂ ಎಂ ಕಲಬುರ್ಗಿ
ಗೋವಿಂದ ಪಾನ್ಸರೆ- ನರೇಂದ್ರ ದಾಭೋಲ್ಕರ್- ಎಂ ಎಂ ಕಲಬುರ್ಗಿ
ಅಹಮದಾಬಾದ್: ದೇಶದಲ್ಲಿ ಸೌಹಾರ್ದಯುತ ಸಾರ್ವಜನಿಕ ಚರ್ಚೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಗುಜರಾತ್ ನ ನವಸಾರಿಯಲ್ಲಿ ಹೊಸ ವೇದಿಕೆಯೊಂದು ಆರಂಭವಾಗಿದೆ. 
ಹುತಾತ್ಮ ದಿನದ ಹಿನ್ನೆಲೆಯಲ್ಲಿ ಶನಿವಾರ ಸುಮಾರು 500ರಷ್ಟು ಸಾಹಿತಿಗಳು, ಲೇಖಕರು ಹಾಗೂ ಕಲಾವಿದರು ಈ "ಸರ್ವಭಾಷಾ ಸಂವಾದ"ಕ್ಕೆ ಚಾಲನೆ ನೀಡಿದ್ದಾರೆ.
ವಿಶೇಷವೆಂದರೆ, ಹತ್ಯೆಗೀಡಾದ ವಿಚಾರವಾದಿಗಳಾದ ಕರ್ನಾಟಕದ ಎಂ ಎಂ ಕಲಬುರ್ಗಿ, ಮಹಾರಾಷ್ಟ್ರದ ಗೋವಿಂದ ಪಾನ್ಸರೆ, ನರೇಂದ್ರ ದಾಭೋಲ್ಕರ್ ಅವರ ಕುಟುಂಬ ಸದಸ್ಯರೂ ಇದರಲ್ಲಿ ಪಾಲ್ಗೊಂಡಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಅಹಿಂಸಾತ್ಮಕ ಮಾರ್ಗವನ್ನು ಆರಂಭಿಸುವುದೇ ಈ ರಾಜಕೀಯೇತರ ಸಮಾವೇಶದ ಉದ್ದೇಶವಾಗಿದ್ದು, ಡಾ.ಗಣೇಶ್ ದೇವಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಆರಂಭವಾಗಿದೆ. ಇಲ್ಲಿ ಸೇರಿದ್ದ ಸಾಹಿತಿಗಳು ದಂಡಿಯತ್ತ ಪ್ರಯಾಣ ಬೆಳೆಸುತ್ತಿದ್ದಾಗ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಅವರು ನವಸಾರಿ ಕೃಷಿ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ಸೇರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com