ಭಾರತದ ಪ್ರಧಾನಿ ಬಳಿ ಇರುವುದು ಬರೀ 4,700 ರು. ನಗದು ಮಾತ್ರ..!

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ನಗದು ಹಣ ಎಷ್ಟಿರಬಹುದು..ಲಕ್ಷ, ಕೋಟಿಗಳಲ್ಲಿ ನೀವು ಊಹಿಸಿಕೊಂಡರೆ ಅದು ತಪ್ಪು...
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ನಗದು ಹಣ ಎಷ್ಟಿರಬಹುದು..ಲಕ್ಷ, ಕೋಟಿಗಳಲ್ಲಿ ನೀವು ಊಹಿಸಿಕೊಂಡರೆ ಅದು ತಪ್ಪು...

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಪ್ರಸ್ತುತ ನಗದು ಹಣವೆಂದು ಇರುವುದು ಕೇವಲ 4 700 ರುಪಾಯಿಗಳಷ್ಟೇ ಅಂತೆ. ಈ ವಿಚಾರವನ್ನು ಬಯಲು  ಮಾಡಿದ್ದು ಯಾವುದೇ ಆರ್ ಟಿಐ ಅರ್ಜಿ ಅಥವಾ ಖಾಸಗಿ ಸುದ್ದಿ ಮಾಧ್ಯಮಗಳ ಕುಟುಕು ಕಾರ್ಯಾಚರಣೆಯಲ್ಲ. ಬದಲಿಗೆ ಸ್ವತಃ ಪ್ರಧಾನಮಂತ್ರಿ ಕಾರ್ಯಾಲಯವೇ  ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯನ್ನು ನಿಯಮಾನುಸಾರ ಬಹಿರಂಗ ಪಡಿಸಿದೆ.

ಪ್ರಸ್ತುತ ನರೇಂದ್ರ ಮೋದಿ ಅವರ ಬಳಿ ಹೇಳಿಕೊಳ್ಳುವಷ್ಟು ನಗದು ಹಣ ಇಲ್ಲದೇ ಹೋದರೂ ಅವರ ಚರಾಸ್ತಿ ಮೌಲ್ಯ ಮಾತ್ರ 25 ಪಟ್ಟು ಹೆಚ್ಚಾಗಿದ್ದು, 1.41  ಕೋಟಿಗೇರಿದೆ. ಈ ಹಿಂದೆ ಅಂದರೆ ಸುಮಾರು 13 ವರ್ಷಗಳ ನರೇಂದ್ರ ಮೋದಿ ಖರೀದಿಸಿದ್ದ ಚರಾಸ್ತಿ ಮೌಲ್ಯ ಪ್ರಸ್ತುತ ಮಾರುಕಟ್ಟೆ ಮೌಲ್ಯದಂತೆ ಏರಿಕೆಯಾಗಿದೆ.  ಹೀಗಾಗಿ ಅವರ ಆಸ್ತಿ ಮೌಲ್ಯ ಶೇ.25ರಷ್ಟು ಹೆಚ್ಚಾಗಿದೆ.

ಕಳೆದ ವರ್ಷ ಅಂದರೆ 2015 ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಪ್ರಧಾನಿ ಮೋದಿ ಅವರ ಸ್ಥಿರಾಸ್ತಿ ಮತ್ತು ಚರಾಸ್ತಿಯ ವಿವರಗಳನ್ನು ಪ್ರಧಾನಿ  ಕಾರ್ಯಾಲಯವು ನಿಯಮಾನುಸಾರವಾಗಿ ಬಹಿರಂಗಪಡಿಸಿದೆ. ಆ ಪ್ರಕಾರ ನರೇಂದ್ರ ಮೋದಿ ಅವರ ಒಟ್ಟು ಸ್ಥಿರಾಸ್ತಿ ಮತ್ತು ಚರಾಸ್ತಿಯ ಮೌಲ್ಯ 1,41,14,893 ರು.  ಆಗಿದೆ. 2014ರಲ್ಲಿ ಈ ಮೌಲ್ಯವು 1,26,12,288 ರೂ. ಆಗಿತ್ತು. ಈ ವೇಳೆ ನರೇಂದ್ರ ಮೋದಿ ಅವರ ಬಳಿ 38,700 ರು.ಗಳು ನಗದು ಇತ್ತು.

ಪ್ರಧಾನಿ ಕಾರ್ಯಾಲಯ ಇಂದು ಬಹಿರಂಗ ಪಡಿಸಿರುವ ಮಾಹಿತಿಗಳ ಪ್ರಕಾರ ನರೇಂದ್ರ ಮೋದಿ ಅವರ ಬಳಿ ಯಾವುದೇ ಮೋಟಾರು ವಾಹನ, ವಿಮಾನ, ಹಾಯಿ  ದೋಣಿ ಅಥವಾ ಹಡಗುಗಳಿಲ್ಲ. ದೆಹಲಿಯಲ್ಲಿ ಅವರಿಗೆ ಯಾವುದೇ ಬ್ಯಾಂಕ್‌ ಖಾತೆ ಇಲ್ಲ ಮತ್ತು ಗುಜರಾತ್‌ನಲ್ಲಿದ್ದ ಬ್ಯಾಂಕ್‌ ಖಾತೆಗಳನ್ನೇ ಅವರು ಇಂದಿಗೂ  ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ.

ಮೋದಿ ಅವರ ಬಳಿ ಇರುವ ಎಲ್‌ ಆ್ಯಂಡ್‌ ಟಿ ಸಂಸ್ಥೆಯ ಇನ್‌ಫ್ರಾ ಬಾಂಡ್‌ಗಳ ಮೌಲ್ಯ (ತೆರಿಗೆ ಉಳಿತಾಯ) 20,000 ರು. ಮತ್ತು ಎನ್‌ಎಸ್‌ಸಿ ಮೌಲ್ಯ 5.45 ಲಕ್ಷ  ರು, 1.99 ಲಕ್ಷ ರು ಮೌಲ್ಯದ ಜೀವ ವಿಮೆ ಗಳನ್ನು ಸೇರಿಸಿದರೆ ಮೋದಿ ಅವರ ಒಟ್ಟು ಚರಾಸ್ತಿ ಮೌಲ್ಯ 41.15 ಲಕ್ಷ ರು.ಗಳಾಗುತ್ತವೆ. ಇನ್ನು ಮೋದಿ ಅವರಿಗೆ  ಯಾವುದೇ ರೀತಿಯ ಸಾಲವಿಲ್ಲ. ಅವರ ಬಳಿ ಅಂದಾಜು 45 ಗ್ರಾಂ ತೂಕದ ಚಿನ್ನಾಭರಣವಿದ್ದು, ಇದರ ಪ್ರಸ್ತುತ ಮಾರುಕಟ್ಟೆ ಬೆಲೆ 1.19 ಲಕ್ಷ ರುಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com