ಅದಿಲಾಬಾದ್ ನಲ್ಲಿ ಮತ್ತೊಂದು ಸ್ವಾತಿ ಪ್ರಕರಣ: ಪ್ರೀತಿ ನಿರಾಕರಿಸಿದ ಯುವತಿಯ ಕತ್ತು ಸೀಳಿದ ಯುವಕ
ಹೈದರಾಬಾದ್: ಟೆಕ್ಕಿ ಯುವತಿಯೊಬ್ಬಳ ಕೊಲೆ ಪ್ರಕರಣ ಇನ್ನೂ ಹಚ್ಚಹಸಿರಾಗಿರುವಾಗಲೇಚೆನ್ನೈಯಲ್ಲಿ ಕಳೆದ ತಿಂಗಳು ಹಾಡುಹಗಲೇ ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ಯುವತಿಯೊಬ್ಬಳು ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಯುವಕನೊಬ್ಬ ಆಕೆಯನ್ನು ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಆರೋಪಿ ಕಳೆದ ಕೆಲ ತಿಂಗಳುಗಳಿಂದ ಯುವತಿಗೆ ತನ್ನ ಪ್ರೀತಿಯನ್ನು ಸ್ವೀಕರಿಸುವಂತೆ ಅಂಗಲಾಚುತ್ತಿದ್ದ. ಇದಕ್ಕೆ ಯುವತಿ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗದಿದ್ದಾಗ ಈ ಕೃತ್ಯವನ್ನು ಎಸಗಿದ್ದಾನೆ.
ಡಿ.ಸಂಧ್ಯಾ(19 ವರ್ಷ) ಅದಿಲಾಬಾದ್ ಜಿಲ್ಲೆಯ ಬೈನ್ಸಾ ಪಟ್ಟಣದವಳಾಗಿದ್ದು, ಅದೇ ಪ್ರದೇಶದ ದ್ವಿತೀಯ ಪದವಿಯ ವಿದ್ಯಾರ್ಥಿ 22 ವರ್ಷದ ಎಂ.ಮಹೇಶ್ ಒಂದು ವರ್ಷದ ಹಿಂದೆ ತನ್ನ ಪ್ರೀತಿಯನ್ನು ಯುವತಿಗೆ ತಿಳಿಸಿದ್ದ. ಆದರೆ ಸಂಧ್ಯಾ ಅವನ ಪ್ರೊಪ್ರೋಸಲ್ ನ್ನು ತಿರಸ್ಕರಿಸಿದ್ದಳು.
ಅಂದಿನಿಂದ ಮಹೇಶ್ ಸಂಧ್ಯಾಳಿಕೆ ತೊಂದರೆ ನೀಡಲಾರಂಭಿಸಿದ. ಇಂದು ಅಪರಾಹ್ನ ತನ್ನ ಮನೆ ಹತ್ತಿರದ ಅಂಗಡಿಯಿಂದ ಸಾಮಾನು ತರಲೆಂದು ಸಂಧ್ಯಾ ಹೋಗುತ್ತಿದ್ದ ವೇಳೆ ಹೊಂಚುಹಾಕುತ್ತಿದ್ದ ಮಹೇಶ್ ಆಕೆಯ ಕತ್ತು ಸೀಳಿ ಕೊಂದಿದ್ದಾನೆ. ಸ್ಥಳೀಯರು ಮಹೇಶ್ ನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ