ಎನ್ಐಎ ಬಂಧಿಸಿದ್ದ 5 ಶಂಕಿತ ಉಗ್ರರಿಗೆ ಎಂಐಎಂನಿಂದ ಕಾನೂನು ನೆರವು

ಇಸಿಸ್ ಉಗ್ರರೆಂದು ಶಂಕಿಸಿ ಹೈದರಾಬಾದ್ ನಲ್ಲಿ ಎನ್ ಐಎ ಅಧಿಕಾರಿಗಳು ಬಂಧಿಸಿರುವ ಒಟ್ಟು 11 ಜನರ ಪೈಕಿ 5 ಯುವಕರಿಗೆ ಕಾನೂನು ನೆರವು ನೀಡುವುದಾಗಿ ಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ತಿಳಿಸಿದ್ದಾರೆ.
ಎಂಐಎಂ ಮುಖಂಡ ಅಸಾವುದ್ದೀನ್ ಓವೈಸಿ
ಎಂಐಎಂ ಮುಖಂಡ ಅಸಾವುದ್ದೀನ್ ಓವೈಸಿ

ಹೈದರಾಬಾದ್: ಇಸಿಸ್ ಉಗ್ರರೆಂದು ಶಂಕಿಸಿ ಹೈದರಾಬಾದ್ ನಲ್ಲಿ ಎನ್ ಐಎ ಅಧಿಕಾರಿಗಳು ಬಂಧಿಸಿರುವ ಒಟ್ಟು 11 ಜನರ ಪೈಕಿ 5 ಯುವಕರಿಗೆ ಕಾನೂನು ನೆರವು ನೀಡುವುದಾಗಿ ಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ತಿಳಿಸಿದ್ದಾರೆ.

ಎನ್ ಐಎ ಅಧಿಕಾರಿಗಳು ಬಂಧಿಸಿರುವವರ ಪೈಕಿ ಐವರು ಯುವಕರು ಅಮಾಯಕರೆಂದು ತಿಳಿದುಬಂದಿದ್ದು, ಅವರಿಗೆ ಕಾನೂನು ನೆರವು ನೀಡಲು ಎಂಐಎಂ ನಿರ್ಧರಿಸಿದೆ ಆದರೆ ಎಂದಿಗೂ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಎಂದು ಅಸಾವುದ್ದೀನ್ ಓವೈಸಿ ಸ್ಪಷ್ಟಪಡಿಸಿದ್ದಾರೆ.

5 ಯುವಕರ ಕುಟುಂಬ ಸದಸ್ಯರು ಕಾನೂನು ಹೋರಾಟಕ್ಕೆ ನೆರವು ನೀಡುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ, ಈ ನಿರ್ಧಾರ ಕೈಗೊಳ್ಳಲಾಗಿದ್ದು, ಯುವಕರ ಪರ ವಾದ ಮಂಡಿಸಲು ಓರ್ವ ವಕೀಲರನ್ನು ನೇಮಕ ಮಾಡಲಾಗುತ್ತದೆ. ಒಂದು ವೇಳೆ ಬಂಧಿತ ಯುವಕರು ಅಮಾಯಕರೆಂಬುದು ಸಾಬೀತಾದರೆ, ಆ ಯುವಕರನ್ನು ಬಂಧಿಸಿದ್ದ ಎನ್ಐಎ ಅಧಿಕಾರಿಗಳನ್ನು ಅಮಾನತು ಮಾಡಲು ಎನ್ಐಎ ಸಿದ್ಧವಿದೆಯಾ ಎಂದು ಅಸಾವುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.

ಜೂ.29 ರಂದು ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ 11 ಶಂಕಿತ ಇಸಿಸ್ ಉಗ್ರರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದರು. ಹೈದಾರಾಬಾದ್ ನ ಮೋಘಲ್ ಪುರ, ಭವಾನಿ ನಗರ, ಮೀರ್ ಚೌಕ್, ಚಂದ್ರಯಾನಗುಟ್ಟಾ, ಬರ್ಕಾಸ್, ತಲಬಕಟ್ಟಾ ಮುಂತಾದ ಪ್ರದೇಶಗಳಲ್ಲಿ ಏಕಕಾಲದಲ್ಲಿ ನಡೆಸಿದ್ದ ದಾಳಿ ವೇಳೆ 11 ಮಂದಿ ಇಸಿಸ್ ಬೆಂಬಲಿಗ ವ್ಯಕ್ತಿಗಳನ್ನು ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com