
ನವದೆಹಲಿ: ಮಹತ್ವದ ಸಭೆಯಲ್ಲಿ ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದ ಸಚಿವರು ಪ್ರಧಾನಿ ನರೇಂದ್ರ ಮೋದಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಘಟನೆ ಮೋದಿ ಸಚಿವರ ಕಾರ್ಯಕ್ಷಮತೆ ಪರಿಶೀಲನಾ ಸಭೆ ನಡೆಸುತ್ತಿದ್ದಾಗ ನಡೆದಿದ್ದು, ಪವರ್ಪಾಯಿಂಟ್ ಪ್ರಸ್ತುತಿಗಳ ಪ್ರದರ್ಶನ ನಡೆಯುತ್ತಿರಬೇಕಾದರೆ ಕೆಲವು ಸಚಿವರುಗಳು ಮೊಬೈಲ್ ಫೋನ್ ಬಳಕೆ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಸ್ವತಃ ಪ್ರಧಾನಿಯವರೇ ಪವರ್ ಪಾಯಿಂಟ್ ಪ್ರಸ್ತುತಿ ಬಗ್ಗೆ ಟಿಪ್ಪಣಿ ಬರೆದುಕೊಳ್ಳುತ್ತಿದ್ದರೆ ಕೆಲವು ಸಚಿವರು ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು ಇದರಿಂದ ಅಸಮಾಧಾನಗೊಂಡ ಪ್ರಧಾನಿ ನರೇಂದ್ರ ಮೋದಿ ಕೆಲವು ಗಂಟೆಗಳು ಮೊಬೈಲ್ ಬಳಕೆ ಮಾಡದೇ ಇದ್ದರೂ ಜೀವನ ನಡೆಯಲಿದೆ ಎಂದು ಸಭೆಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದ ಸಚಿವರನ್ನು ಪರೋಕ್ಷವಾಗಿ ತಾರಾಟೆಗೆ ತೆಗೆದುಕೊಂಡಿದ್ದಾರೆ.
ಚುನಾವಣೆಗೂ ಮುನ್ನ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವತ್ತ ಹೆಚ್ಚು ಗಮನ ನೀಡಬೇಕು, ಒಂದು ವೇಳೆ ಮೊಬೈಲ್ ನಲ್ಲೇ ಬ್ಯುಸಿಯಾಗಬೇಕಿರಬೇಕೆಂದಿದ್ದರೆ ಸಭೆಯಲ್ಲಿ ಪಾಲ್ಗೊಳ್ಳಬಾರದಿತ್ತು ಎಂದು ಮೋದಿ ಮಂತ್ರಿಮಂಡಲದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ಸಭೆಗಳಲ್ಲಿ ಈ ರೀತಿ ಮೊಬೈಲ್ ನ್ನು ಬಳಕೆ ಮಾಡಬಾರದು ಎಂದು ಮೋದಿ ಸಚಿವರುಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
Advertisement