ಶೌಚಾಲಯಕ್ಕೆ ತೆರಳಲು ತೃತೀಯಲಿಂಗಿಗಳಿಗೆ ಅಡ್ಡಿ: ಮುಂದುವರಿದ ಸಾಮಾಜಿಕ ಪಿಡುಗು

ಸ್ವಚ್ಛ ಭಾರತ ಅಭಿಯಾನದ ಪ್ರಚಾರದ ಅಬ್ಬರದಲ್ಲಿ ಸಂಕಟದ ಕೂಗೊಂದು ಸದ್ದಾಗದೆ ಮುಳುಗಿಹೋಗಿದೆ. ಸ್ವಚ್ಛತೆ, ಆರೋಗ್ಯದ ದೃಷ್ಟಿಯಿಂದ ದೇಶದ ಮೂಲೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದರಾಬಾದ್: ಸ್ವಚ್ಛ ಭಾರತ ಅಭಿಯಾನದ ಪ್ರಚಾರದ ಅಬ್ಬರದಲ್ಲಿ ಸಂಕಟದ ಕೂಗೊಂದು ಸದ್ದಾಗದೆ ಮುಳುಗಿಹೋಗಿದೆ. ಸ್ವಚ್ಛತೆ, ಆರೋಗ್ಯದ ದೃಷ್ಟಿಯಿಂದ ದೇಶದ ಮೂಲೆ, ಮೂಲೆಗಳಲ್ಲಿ ಶೌಚಾಲಯ ನಿರ್ಮಿಸಬೇಕೆಂದು ಉನ್ನತ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದ್ದರೂ ಕೂಡ ಸಮಾಜದ ಕಳಂಕಿತ ವರ್ಗಕ್ಕೆ ಸೇರಿದ ತೃತೀಯ ಲಿಂಗಿಗಳು ಪ್ರತ್ಯೇಕ ಶೌಚಾಲಯವಿಲ್ಲದೆ ಮೌನವಾಗಿ ನೋವನ್ನು ಸಹಿಸಿಕೊಳ್ಳುತ್ತಿದ್ದಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸುಮಾರು ಒಂದು ಲಕ್ಷ ತೃತೀಯ ಲಿಂಗಿಗಳಿದ್ದಾರೆ. ಅವರಿಗೆ ಸ್ನಾನ ಮಾಡಲು, ಬಟ್ಟೆ ತೊಳೆಯಲು, ಶೌಚಾಲಯ ಹೋಗಲು ಸಾಮಾನ್ಯ ಬಚ್ಚಲು ಮನೆಗಳಿಗೆ ಯಾರೂ ಬಿಡುವುದಿಲ್ಲ. ಈ ಮೂಲಕ ಸಮಾಜದಲ್ಲಿ ತಿರಸ್ಕಾರ, ಅವಮಾನಕ್ಕೆ ಒಳಗಾಗಿರುವ ತೃತೀಯ ಲಿಂಗಿಗಳಿಗೆ ತಮ್ಮ ನಿತ್ಯದ ಸಹಜ ಕಾಯಕವನ್ನು ಕೂಡ ಮಾಡಲು ಸ್ವಾತಂತ್ರ್ಯವಿಲ್ಲ ಎಂಬಂತಾಗಿದೆ.
ಜನನಿಬಿಡ ಪ್ರದೇಶಗಳಾದ ಶಾಪಿಂಗ್ ಮಾಲ್, ಫಿಲ್ಮ್ ಥಿಯೇಟರ್, ಬಸ್ಸು, ರೈಲು ನಿಲ್ದಾಣಗಳಲ್ಲಿ ಅವಮಾನ, ತಿರಸ್ಕಾರಗಳನ್ನು ಸಹಿಸಬೇಕಾಗುತ್ತದೆ ಎನ್ನುತ್ತಾರೆ ತೃತೀಯ ಲಿಂಗಿ ವೈಜಯಂತಿ ವಸಂತ ಮೋಗ್ಲಿ. 
ನಮಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಶೌಚಾಲಯ, ಸ್ನಾನಗೃಹ  ಸಾರ್ವಜನಿಕ ಸ್ಥಳಗಳಲ್ಲಿ ಇರಬೇಕೆಂಬುದು ತೃತೀಯಲಿಂಗಿಗಳ ಒತ್ತಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com