
ನವದೆಹಲಿ: ಢಾಕಾದ ಹೋಲಿ ಆರ್ಟಿಸನ್ ಬೇಕರಿ ರೆಸ್ಟೋರೆಂಟ್‌ನಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಮೃತರಾದ ಭಾರತೀಯ ವಿದ್ಯಾರ್ಥಿನಿ ತಾರಿಷಿ ಜೈನ್ ರ ಮೃತ ದೇಹವನ್ನು ಶೀಘ್ರದಲ್ಲಿಯೇ ಭಾರತಕ್ಕೆ ಕರೆತರಲಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್ ತಾರಿಷಿ ಹತ್ಯೆ ನಿಜಕ್ಕೂ ಅಮಾನವೀಯವಾಗಿದೆ. ತಾರಿಷಿ ಮೃತದೇಹ ಪತ್ತೆಯಾಗಿದ್ದು, ದೇಹದ ಮೇಲೆ ಕೆಲ ಗಾಯದ ಗುರುತುಗಳು ಪತ್ತೆಯಾಗಿವೆ. ಮೃತದೇಹವನ್ನು ಭಾರತಕ್ಕೆ ತರಲು ಕೆಲವು ಶಾಸನಾತ್ಮಕ ಪ್ರಕ್ರಿಯೆಗಳನ್ನು ಪೂರೈಸಬೇಕಾಗಿದೆ ಎ೦ದು ಟ್ವೇಟ್ ಮಾಡಿದ್ದಾರೆ.
ತಾರಿಷಿ ಪೋಷಕರಿಗೆ ವೀಸಾ ನೀಡಿ ಬಾಂಗ್ಲಾಗೆ ಕಳುಹಿಸಿದ್ದು, ಅವರು ತಾರಿಷಿ ಮೃತದೇಹವನ್ನು ಪತ್ತೆ ಮಾಡಿದ್ದಾರೆ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.
ಹತ್ಯೆಗೂ ಮೊದಲು ಪೋಷಕರಿಗೆ ಕರೆ ಮಾಡಿದ್ದ ತಾರಿಷಿ?
ಇನ್ನು ಢಾಕಾದ ಕೆಫೆಯಲ್ಲಿ ಉಗ್ರರಿಂದ ಭೀಕರವಾಗಿ ಹತ್ಯೆಗೀಡಾದ ಭಾರತೀಯ ವಿದ್ಯಾಥಿ೯ನಿ ತಾರಿಷಿ ಜೈನ್ ಉಗ್ರ ದಾಳಿಗೂ ಮುನ್ನ ತಮ್ಮ ಪೋಷಕರಿಗೆ ಕರೆ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ. ತಾರಿಷಿ ಸಾವಿಗೂ ಮುನ್ನ ತಮ್ಮ ತ೦ದೆ ಸ೦ಜೀವ್ ಜೈನ್‍ಗೆ ಕರೆಮಾಡಿದ್ದು, ನಾವಿರುವ ಕೆಫೆಯ ಮೇಲೆ ಉಗ್ರರು ದಾಳಿ ನಡೆಸಿದ್ದು, ನಾವು ಕೆಫೆಯ ಶೌಚಗೃಹದಲ್ಲಿದ್ದೇವೆ. ಅವರು ನಮ್ಮ ಬಳಿಯೇ ಬರುತ್ತಿದ್ದು, ನಾನು ಬದುಕಿಬರುತ್ತೇನೆ ಎ೦ಬ ನ೦ಬಿಕೆಯಿಲ್ಲ. ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಹತ್ಯೆ ಮಾಡಬಹುದು' ಎ೦ದು ತಾರಿಷಿ ಭಯಭೀತರಾಗಿ ತಿಳಿಸಿದ್ದರು ಎಂದು ವರದಿಯಾಗಿದೆ.
Advertisement