ರಾಹುಲ್ ಗಾಂಧಿ-ಪ್ರಿಯಾಂಕಾ ಗಾಂಧಿ(ಸಂಗ್ರಹ ಚಿತ್ರ)
ದೇಶ
ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಕಾಂಗ್ರೆಸ್ ನಿಂದ ಪ್ರತಿಭಟನೆ: ರಾಹುಲ್ ಗಾಂಧಿ ನಿಯೋಜನೆ
ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳು ಚುನಾವಣೆಯನ್ನು ಎದುರಿಸಲಿವೆ. ಕಾಂಗ್ರೆಸ್ ಪಕ್ಷಕ್ಕೆ ಈ ಮೂರೂ...
ನವದೆಹಲಿ: ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳು ಚುನಾವಣೆಯನ್ನು ಎದುರಿಸಲಿವೆ. ಕಾಂಗ್ರೆಸ್ ಪಕ್ಷಕ್ಕೆ ಈ ಮೂರೂ ರಾಜ್ಯಗಳು ಮುಖ್ಯ. ಇದುವರೆಗಿನ ಚುನಾವಣೆಗಳಲ್ಲೆಲ್ಲ ಕಳಪೆ ಮಟ್ಟದ ಫಲಿತಾಂಶ ಕಂಡಿದ್ದ ಕಾಂಗ್ರೆಸ್ ಗೆ ಇಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.
ಈ ಸಂದರ್ಭದಲ್ಲಿ ಮೂರೂ ರಾಜ್ಯಗಳಿಗೆ ಪ್ರಿಯಾಂಕಾ ವಾದ್ರಾ ಗಾಂಧಿಯನ್ನು ಮುಖ್ಯ ಪ್ರಚಾರಕಿಯಾಗಿ ಬಳಸಿಕೊಂಡು ರಾಹುಲ್ ಗಾಂಧಿಯನ್ನು ಏಳು ರಾಜ್ಯಗಳ ಅರಣ್ಯ ಹಕ್ಕು ಕಾಯ್ದೆಯ ಹೋರಾಟಕ್ಕೆ ಕಳುಹಿಸುವ ಯೋಜನೆ ಕಾಂಗ್ರೆಸ್ ನದ್ದು. ಅವುಗಳಲ್ಲಿ ಈ ಮೂರೂ ರಾಜ್ಯಗಳಿಲ್ಲದಿರುವುದು ವಿಶೇಷ.
ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್ ಗಢ, ಜಾರ್ಖಂಡ್, ಒಡಿಶಾ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸುವುದಕ್ಕೆ ಕಾರಣಗಳೇನು, ಕಾಯ್ದೆಗೆ ಬಲ ನೀಡುವ ಉದ್ದೇಶದಿಂದ ಕಾಂಗ್ರೆಸ್ ಹೋರಾಟ ನಡೆಸಲಿದೆ, ಇದರ ಜವಾಬ್ದಾರಿಯನ್ನು ರಾಹುಲ್ ಗಾಂಧಿ ವಹಿಸಿಕೊಳ್ಳಲಿದ್ದಾರೆ.
ರಾಹುಲ್ ಗಾಂಧಿ ನಿನ್ನೆ 10 ಜನಪಥ್ ಮಾರ್ಗದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ರಚನಾತ್ಮಕ ಸಭೆ ನಡೆಸಿದ್ದರು. ಅದರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉತ್ತರ ಪ್ರದೇಶದ ಎಐಸಿಸಿ ಮುಖ್ಯಸ್ಥೆ ಗುಲಾಂ ನಬಿ ಆಜಾದ್ ಭಾಗವಹಿಸಿದ್ದರು. ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತರದಿರುವುದಕ್ಕೆ ಬಹುರಾಜ್ಯ ಪ್ರತಿಭಟನೆ ಕೈಗೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.
ಯುಪಿಎ ಆಡಳಿತ ಸಂದರ್ಭದಲ್ಲಿ ಅನುಮೋದಿಸಿದ ಅರಣ್ಯ ಹಕ್ಕು ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಾರದಿರುವ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ಮಾಡಲಿದೆ. ಹಿಂದೆ ಕಾಂಗ್ರೆಸ್ ಭೂ ಸ್ವಾದೀನ ಮಸೂದೆ ಜಾರಿ ವಿರುದ್ಧ ನಡೆಸಿದ ಪ್ರತಿಭಟನೆಗೆ ಸಮನಾಗಿ ಅರಣ್ಯ ಹಕ್ಕು ಕಾಯ್ದೆ ಜಾರಿಗಾಗಿ ಆಂಧ್ರಪ್ರದೇಶದಿಂದ ಆಗಸ್ಟ್ ಮೊದಲ ವಾರದಲ್ಲಿ ಆರಂಭಿಸಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ