
ರಾಜ್‌ಕೋಟ್: ದಡೂತಿ ಪತ್ನಿ ಮನೆಯ ಮೆಟ್ಟಿಲೇರುವಾಗ ಕಾಲು ಜಾರಿ ಹಿಂದೆ ಬರುತ್ತಿದ್ದ ಪತಿಯ ಮೇಲೆ ಬಿದ್ದ ಕಾರಣ ದಂಪತಿಗಳು ಸಾವನ್ನಪ್ಪಿರುವ ದಾರುಣ ಘಟನೆ ರಾಜ್ ಕೋಟ್ ನಲ್ಲಿ ನಡೆದಿದೆ.
68 ವರ್ಷದ 128 ಕೆಜಿ ತೂಕದ ಗೃಹಿಣಿ ಮಂಜುಳಾ ವಿಠ್ಲಾಣಿ ಅವರಿಗೆ ಬೆಳಗ್ಗೆ 4 ಗಂಟೆ ಸುಮಾರಿಗೆ ಮಗ ಆಶೀಶ್ ನ ಹೆಂಡತಿ ನಿಶಾ ಗಂಡನಿಗೆ ಉಸಿರಾಟ ತೊಂದರೆಯಾಗಿದೆ ಎಂದು ಹೇಳಿದ್ದಾರೆ. ಮಹಡಿ ಮೇಲಿದ್ದ ಮಗನನ್ನು ನೋಡಲು ಅವಸರದಿಂದ ಮೆಟ್ಟಿಲೇರುವಾಗ ಪತಿ ನಟವರ್ ಲಾಲ್ ಸಹ ಹಿಂದೆ ಹೋಗುತ್ತಿದ್ದರು.
ಈ ವೇಳೆ ಮಂಜುಳಾ ಅವರು ಕಾಲು ಜಾರಿ ಹಿಂದಕ್ಕೆ ಬಿದ್ದಿದ್ದಾರೆ. ತಮ್ಮ ಮೇಲೆ ಬಿದ್ದ ಹೆಂಡತಿ ದೇಹದ ತೂಕ ಸಹಿಸಿಕೊಳ್ಳಲಾಗದೇ ನಟವರ್ ಲಾಲ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇನ್ನು ತೀವ್ರವಾಗಿ ಗಾಯಗೊಂಡಿದ್ದ ಮಂಜುಳರನ್ನು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಅತ್ತೆ ಮೆಟ್ಟಿಲಿನಿಂದ ಜಾರಿದನ್ನು ಕಂಡ ಸೊಸೆ ಅವರನ್ನು ಉಳಿಸುವ ಯತ್ನ ಮಾಡಿ ಅವರು ಸಹ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
Advertisement