ಸೇನೆಯಲ್ಲಿ ಮಹಿಳಾ ಪಡೆಯನ್ನು ಹೆಚ್ಚಿಸುವ ಬಗ್ಗೆ ಚಿಂತನೆ: ಮನೋಹರ್ ಪರಿಕ್ಕರ್

ಪ್ರಪಂಚದ ಮೂರನೇ ಅತಿ ದೊಡ್ಡ ಭಾರತೀಯ ಸೇನೆಯಾಗಿದೆ. ಹೀಗಾಗಿ ಸಮರ ನೌಕೆಗಳಲ್ಲಿ ಮಹಿಳಾ ಬೆಟಾಲಿಯನ್ ಸೇರ್ಪಡೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು..
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್

ನವದೆಹಲಿ: ಫೈಟರ್ ಜೆಟ್ ಗಳಿಗೆ ಮಹಿಳಾ ಪೈಲಟ್ ಗಳನ್ನು ನೇಮಕ ಮಾಡುವ ಮೂಲಕ ಮಹಿಳೆಯರಲ್ಲಿದ್ದ ಮಾನಸಿಕ ಸಂಕೋಲೆಯನ್ನು ಮುರಿಯಲಾಗಿದೆ ಎಂದಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭಾರತೀಯ ಸೇನೆಯಲ್ಲಿ ಮಹಿಳಾ ಪಡೆಯನ್ನು ಹೆಚ್ಚಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಜು.5 ರಂದು ನವದೆಹಲಿಯ ಎಫ್ ಐ ಸಿಸಿ ಎಫ್ಎಲ್ ಒ ಮಹಿಳಾ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಯುದ್ಧ ನೌಕೆಗಳಲ್ಲೂ ಮಹಿಳೆಯರ ಪಡೆಯನ್ನು ನಿಯೋಜಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಪಂಚದ ಮೂರನೇ ಅತಿ ದೊಡ್ಡ ಸೇನೆಯಾಗಿರುವ ಭಾರತೀಯ ಸೇನೆಗೆ ಸೇರುವ ಮಹಿಳಾ ಅಧಿಕಾರಿಗಳ ಸಂಖ್ಯೆ ಇಳಿಕೆಯಾಗಿದ್ದು, ಮಹಿಳಾ ಪಡೆಯನ್ನು ಹೆಚ್ಚಿಸುವುದಕ್ಕೆ ಪೂರಕವಾಗುವಂತೆ ಸೈನಿಕ್ ಶಾಲೆಗಳಲ್ಲಿ ಯುವತಿಯರಿಕೆ ಕಲಿಯಲು ಅನುಮತಿ ನೀಡುವುದು ಹಾಗೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮೂಲಕ ಮಹಿಳೆಯರನ್ನು ಸೇನೆಗೆ ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಪರಿಗಣಿಸಲಾಗಿದೆ ಎಂದು ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
   
ನೌಕಾ ಪಡೆ ಹಾಗೂ ಸೇನೆ ಯುದ್ಧದ ವೇಳೆ ಮಹಿಳೆಯರಿಗೆ ಅವಕಾಶ ನೀಡುವುದಾದರೆ ಇಂತಹ ವ್ಯವಸ್ಥೆ ಹೊಂದಿರುವ ಇಸ್ರೇಲ್, ಅಮೆರಿಕ ಸೇರಿದಂತೆ ಕೆಲವೇ ದೇಶಗಳ ಪಟ್ಟಿಗೆ ಭಾರತ ಕೂಡಾ ಸೇರ್ಪಡೆಯಾಗಲಿದೆ. ಆದರೆ ಸೈನಿಕರು ಮಹಿಳಾ ಕಮಾಂಡರ್ ಆದೇಶವನ್ನು ಪಾಲಿಸುತ್ತಾರೋ ಇಲ್ಲವೋ ಎಂಬುದೇ ಚಿಂತೆಯಾಗಿದೆ ಎಂದು ರಕ್ಷಣಾ ಸಚಿವರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com