ರಂಜಾನ್ ಪ್ರಾರ್ಥನೆ ಬಳಿಕ ಶ್ರೀನಗರದಲ್ಲಿ ಭುಗಿಲೆದ್ದ ಹಿಂಸಾಚಾರ; 21 ಪೊಲೀಸರಿಗೆ ಗಾಯ

ಶಾಂತಿ ಮತ್ತು ಸಾಮರಸ್ಯಕ್ಕಾಗಿ ರಂಜಾನ್ ಹಬ್ಬದ ನಿಮಿತ್ತ ಸಲ್ಲಿಸಲಾಗುವ ವಿಶೇಷ ಪ್ರಾರ್ಥನೆ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಶ್ರೀನಗರ ಮತ್ತು ಅನಂತ್ ನಾಗ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರ ದಾಳಿಯಲ್ಲಿ 21 ಮಂದಿ ಪೊಲೀಸರು ಗಾಯಗೊಂಡಿದ್ದಾರೆ...
ಶ್ರೀನಗರಗ ಗಲಭೆ (ಸಂಗ್ರಹ ಚಿತ್ರ)
ಶ್ರೀನಗರಗ ಗಲಭೆ (ಸಂಗ್ರಹ ಚಿತ್ರ)

ಶ್ರೀನಗರ: ಶಾಂತಿ ಮತ್ತು ಸಾಮರಸ್ಯಕ್ಕಾಗಿ ರಂಜಾನ್ ಹಬ್ಬದ ನಿಮಿತ್ತ ಸಲ್ಲಿಸಲಾಗುವ ವಿಶೇಷ ಪ್ರಾರ್ಥನೆ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಶ್ರೀನಗರ ಮತ್ತು  ಅನಂತ್ ನಾಗ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರ ದಾಳಿಯಲ್ಲಿ 21 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

ಪವಿತ್ರ ರಂಜಾನ್ ಹಬ್ಬದ ನಿಮಿತ್ತ ಶ್ರೀನಗರದಲ್ಲಿ ನಡೆಯುತ್ತಿದ್ದ ಸಾಮೂಹಿಕ ಪ್ರಾರ್ಥನೆ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಅನಂತ್ ನಾಗ್ ಜಿಲ್ಲೆಯಲ್ಲೂ  ಇಂತಹುದೇ ಘಟನೆ ನಡೆದಿದ್ದು, ಎರಡೂ ಪ್ರಕರಣದಲ್ಲಿ ಓರ್ವ ಎಎಸ್ ಪಿ ಸೇರಿದಂತೆ ಒಟ್ಟು 21 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಗಾಯಾಳು ಪೊಲೀಸರನ್ನು ಸಮೀಪದ ಆಸ್ಪತ್ರೆಗೆ  ದಾಖಲು ಮಾಡಲಾಗಿದ್ದು, ಘಟನಾ ಪ್ರದೇಶದಲ್ಲಿ ಪ್ರಕ್ಷುಬ್ದ ವಾತಾವರಣ ನೆಲೆಸಿದೆ.

ರಂಜಾನ್ ಹಬ್ಬದ ನಿಮಿತ್ತ ಯಾವುದೇ ಅಹಿಕರ ಘಟನೆ ಸಂಭವಿಸದಂತೆ ಕಾಶ್ಮೀರ ಸರ್ಕಾರ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಈ ಪೈಕಿ ಪ್ರಚೋಧನಾಕಾರಿ ಭಾಷಣೆ ಮಾಡುವ ಶಂಕೆ  ಮೇರೆಗೆ ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಗೃಹ ಬಂಧನದಲ್ಲಿಡಲಾಗಿತ್ತು. ಅಲ್ಲದೆ ಸಾಮೂಹಿಕ ಪ್ರಾರ್ಥನೆಗೆ ಅವರಿಗೆ ಅನುವು ಮಾಡಿಕೊಟ್ಟಿರಲಿಲ್ಲ. ಇದೇ ಕಾರಣಕ್ಕೆ ಅವರ ಬೆಂಬಲಿಗರು  ಶ್ರೀನಗರ, ಬರಾಮುಲ್ಲಾ, ಸೊಪೋರ್ ಮತ್ತು ಅನಂತ್ ನಾಗ್ ಜಿಲ್ಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ವಿನಾಕಾರಣ ಪೊಲೀಸರೊಂದಿಗೆ ತಗಾದೆ ತೆಗೆದಿದ್ದು, ಈ ವೇಳೆ ನಡೆದ ವಾಗ್ವಾದ  ಹಿಂಸಾಚಾರಕ್ಕೆ ತಿರುಗಿ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ.

ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದು, ಲಾಠಿ ಚಾರ್ಜ್, ಅಶ್ರುವಾಯು ಮತ್ತು ಗಾಳಿಯಲ್ಲಿ ಗುಂಡುಹಾರಿಸಿದ್ದಾರೆ. ಆದರೂ ಪರಿಸ್ಥಿತಿ ಶಾಂತವಾಗದೇ ಹಿರಿಯ  ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ವೀಕ್ಷಣೆ ನಡೆಸಿದ್ದಾರೆ.

ಘಟನೆಯಲ್ಲಿ ಮುಬಷೀರ್ ಬುಖಾರಿ ಎಂಬ ಅಸಿಸ್ಟೆಂಟ್ ಸೂಪರಿಂಟೆಂಟ್ ಆಫ್ ಪೊಲೀಸ್ ಹೊಟ್ಟೆಗೆ ಕಲ್ಲೇಟು ಬಿದ್ದಿದ್ದು, ಗಂಭೀರವಾಗಿರುವ ಅವರನ್ನು ಶ್ರೀನಗರದ ಎಸ್ ಎಂಹೆಚ್ ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com