ಉಗ್ರವಾದಕ್ಕೆ ಜಾಕೀರ್ ನಾಯಕ್ ಪ್ರಚೋದನೆ; ಎನ್ ಜಿಒ ನಿಧಿಗಳ ಮೇಲೆ ಗುಪ್ತಚರ ಇಲಾಖೆ ನಿಗಾ

ಢಾಕಾ ದಾಳಿ ಉಗ್ರರಿಗೆ ಸ್ಪೂರ್ತಿಯಾದ ಆರೋಪ ಎದುರಿಸುತ್ತಿರುವ ಇಸ್ಲಾಂ ಪ್ರವಚನಕಾರ ಜಾಕೀರ್ ನಾಯಕ್ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಜಾಕಿರ್ ನಾಯಕ್ ಮತ್ತು ಉಗ್ರರಿಗೆ ನೆರವಾಗುತ್ತಿರುವ ಹಣವನ್ನು ತಡೆಯಲು ಕೇಂದ್ರ ಸರ್ಕಾರ ಕಠಿಣಕ್ರಮಕ್ಕೆ ಮುಂದಾಗಿದೆ..
ವಿವಾದಿತ ಪ್ರವಚನಕಾರ ಜಾಕೀರ್ ನಾಯಕ್ (ಸಂಗ್ರಹ ಚಿತ್ರ)
ವಿವಾದಿತ ಪ್ರವಚನಕಾರ ಜಾಕೀರ್ ನಾಯಕ್ (ಸಂಗ್ರಹ ಚಿತ್ರ)
Updated on

ನವದೆಹಲಿ: ಢಾಕಾ ದಾಳಿ ಉಗ್ರರಿಗೆ ಸ್ಪೂರ್ತಿಯಾದ ಆರೋಪ ಎದುರಿಸುತ್ತಿರುವ ಇಸ್ಲಾಂ ಪ್ರವಚನಕಾರ ಜಾಕೀರ್ ನಾಯಕ್ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಜಾಕಿರ್ ನಾಯಕ್ ಮತ್ತು ಉಗ್ರರಿಗೆ ನೆರವಾಗುತ್ತಿರುವ ಹಣವನ್ನು ತಡೆಯಲು ಕೇಂದ್ರ ಸರ್ಕಾರ ಕಠಿಣಕ್ರಮಕ್ಕೆ ಮುಂದಾಗಿದೆ.

ಇದರ ಮೊದಲ ಭಾಗ ಎಂಬತೆ ಜಾಕಿರ್ ನಾಯಕ್ ಅವರ ಐಆರ್ ಎಫ್ (ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್) ಸೇರಿದಂತೆ ವಿವಿಧ ಎನ್ ಜಿಒಗಳ ಮೂಲಕ ವಿದೇಶಕ್ಕೆ ಹಾರುವ ನಿಧಿಗಳ ಮೇಲೆ ಕೇಂದ್ರ ಗುಪ್ತಚರ ಇಲಾಖೆ ತೀವ್ರ ನಿಗಾ ಇರಿಸಿದೆ ಎಂದು ಹೇಳಲಾಗುತ್ತಿದೆ. ಭಾರತದಿಂದ ವಿವಿಧ ಎನ್ ಜಿಒಗಳ ಮುಖಾಂತರವಾಗಿ ವಿದೇಶಕ್ಕೆ ಹರಿಯುವ ಹಣ ಎಲ್ಲಿಗೆ ಹೋಗುತ್ತಿದೆ ಮತ್ತು ಏತಕ್ಕಾಗಿ ಬಳಕೆಯಾಗುತ್ತಿದೆ ಎಂಬಿತ್ಯಾದಿ ವಿಚಾರಗಳ ಕುರಿತು ಕೇಂದ್ರ ಗುಪ್ತಚರ ಇಲಾಖೆ ನಿಗಾವಹಿಸಲಿದೆ ಎಂದು ತಿಳಿದುಬಂದಿದೆ.

ಪ್ರಮುಖವಾಗಿ ಪ್ರವಚನಕಾರ ಜಾಕೀರ್ ನಾಯಕ್ ಮತ್ತು ಅವರ ಮಾಲೀಕತ್ವದ ಪೀಸ್ ಟಿವಿಯ ಆದಾಯ ಮೂಲದ ಮೇಲೆ ನಿಗಾ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ವಾಹಿನಿಯ ಪರವಾನಗಿ, ವಿದೇಶ ಬಂಡವಾಳಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಗೃಹ ಇಲಾಖೆ ಸಚಿವರೊಬ್ಬರು ತಿಳಿಸಿದ್ದಾರೆ. ಜಾಕಿರ್ ನಾಯಕ್ ಮಾಲೀಕತ್ವದ ಐಆರ್ ಎಫ್ ಸಂಸ್ಥೆ ಮುಂಬೈನ ನಲ್ಲಿ ಜೋಹ್ರ ಮಂಜಿಲ್, ಎಸ್ ವಿಪಿ ರಸ್ತೆಯಲ್ಲಿರುವ ನೊಂದಾವಣಿ ಕಚೇರಿಯಲ್ಲಿ ನೊಂದಾಯಿತವಾಗಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ ಅಡಿಯಲ್ಲಿ ನೊಂದಾವಣಿ ಸಂಖ್ಯೆ 083780696R ಸಂಸ್ಥೆಯ ನೊಂದಾವಣಿ ನಿಯಮಾವಳಿ ಮುರಿದ ಕಾರಣ ರದ್ದಾಗಿತ್ತು ಎಂದು ಮೂಲಗಳು ತಿಳಿಸಿವೆ.

ಎನ್ ಜಿಒಗೆ ಹರಿದು ಬಂದಿದ್ದ ಹಣವನ್ನು ಸಂಸ್ಥೆ ಮುಸ್ಲಿಂ ಯುವಕರನ್ನು ತೀವ್ರಗಾಮಿಗಳನ್ನಾಗಿ ಮಾಡಲು ಬಳಕೆ ಮಾಡಿದ್ದ ಆರೋಪದ ಮೇರೆಗೆ ಅದರ ನೊಂದಾವಣಿಯನ್ನು ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಜಾಕಿರ್ ನಾಯಕ್ ಅವರ ಎನ್ ಜಿಒ ಮತ್ತು ಪೀಸ್ ಟಿವಿಯ ಎಲ್ಲ ವ್ಯವಹಾರಗಳ ಮೇಲೆ ಭದ್ರತಾ ತನಿಖಾ ದಳಗಳು ನಿಗಾವಹಿಸಿವೆ ಎಂದು ಹೇಳಲಾಗುತ್ತಿದೆ.

ದುಬೈನಿ೦ದ ಪ್ರಸಾರ
ಇಸ್ಲಾ೦ ತತ್ವಗಳ ಪ್ರಚಾರಕ್ಕಾಗಿ 2006ರಲ್ಲಿ ಜಾಕೀರ್ ನಾಯಕ್ ಆರ೦ಭಿಸಿದ ಪೀಸ್ ಟಿವಿ ದುಬೈನಿ೦ದ ಪ್ರಸಾರವಾಗುತ್ತಿದೆ. ವಿಶ್ವದ 200 ದೇಶಗಳಲ್ಲಿ ಪೀಸ್ ಟೀವಿ ಪ್ರಸಾರ ವಾಗುತ್ತಿದ್ದು, ಇ೦ಗ್ಲೀಷ್ ಜತೆಗೆ ಉರ್ದು ಹಾಗೂ ಬಾ೦ಗ್ಲಾ ಭಾಷೆಗಳಲ್ಲೂ ಪ್ರಸಾರವಾಗುತ್ತಿದೆ. ಭಯೋತ್ಪಾದನೆಗೆ ಪ್ರಚೋದನೆಗೆ ನೀಡುವ ವಿಷಯಗಳಿವೆ ಎ೦ಬ ಹಿನ್ನೆಲೆಯಲ್ಲಿ 2011ರಲ್ಲಿ ಈ  ವಾಹಿನಿಯನ್ನು ನಿಷೇಧಿಸಲಾಗಿತ್ತು. ಭಾರತದಲ್ಲಿ ಈ ಚಾನೆಲ್ ಕೇ೦ದ್ರ ಸಕಾ೯ರದಿ೦ದ ಅನುಮತಿ ಪಡೆದಿರಲಿಲ್ಲ. ಅನಧಿಕೃತವಾಗಿ ಕೆಲ ಕೇಬಲ್ ಆಪರೇಟರ್‍ಗಳ ಮೂಲಕ ಪ್ರಸಾರ  ಮಾಡಲಾಗುತ್ತಿತ್ತು ಎಂಬ ಆರೋಪವೂ ಚಾನೆಲ್ ಮೇಲಿದೆ.

ನಾಯಕ್ ಸ್ಪಷ್ಟನೆ
ಢಾಕಾ ಉಗ್ರರಿಗೆ ಪ್ರೇರಣೆಯಾಗಿದ್ದರು ಎ೦ಬ ಆರೋಪವನ್ನು ವಿವಾದಿತ ಪ್ರವಚನಕಾರ ಜಾಕೀರ್ ನಾಯಕ್ ತಳ್ಳಿ ಹಾಕಿದ್ದು, ಇನ್ನೊಬ್ಬರನ್ನು ಕೊಲ್ಲುವ ಅಥವಾ ಮುಸ್ಲಿಂ- ಮುಸ್ಲಿಮೇತರ ವ್ಯಕ್ತಿಯನ್ನು ಕೊಲ್ಲುವ೦ತೆ ನಾನು ಯಾವುದೇ ಹೇಳಿಕೆ ನೀಡಿಲ್ಲ ಎ೦ದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com