
ಸಿಲ್ವರ್ ಸ್ಟೋನ್: ಭಾರತೀಯ ಬ್ಯಾಂಕುಗಳಿಂದ ಪಡೆದಿರುವ ಸಾಲ ಮರುಪಾವತಿ ಮಾಡಲಾಗದೇ ವಿದೇಶದಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ, ಶುಕ್ರವಾರ ಸಿಲ್ವರ್ ಸ್ಟೋನ್ ನಲ್ಲಿ ನಡೆದ ಫಾರ್ಮುಲಾ ಒನ್ ರೇಸ್ ನ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ವಿಜಯ್ ಮಲ್ಯ, ಜೀವನ ನಿರಂತರವಾಗಿ ನಡೆಯುತ್ತಿರಬೇಕು. ವೈಯುಕ್ತಿಕವಾಗಿ ನನಗೆ ರೇಸ್ ಅಂದರೆ ತುಂಬಾ ಇಷ್ಟ. ಇದೇ ಕಾರಣಕ್ಕೆ ನಾನು ರೇಸ್ ತಂಡವನ್ನು ಖರೀದಿಸಿದ್ದೇನೆ. ಮೊನಾಕೋ ಎಫ್ 1 ರೇಸ್ ಅನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಭಾರತ ಸರ್ಕಾರ ನನ್ನ ಪಾಸ್ ಪೋರ್ಟ್ ರದ್ದು ಮಾಡಿದ್ದು, ನಾನು ದೇಶ ಬಿಡದಂತೆ ಕಟ್ಟಿಹಾಕಿದೆ. ಇದರಿಂದಾಗಿ ನಾನು ಎಲ್ಲಿಗೂ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಲಂಡನ್ ನಗರವನ್ನು ತನ್ನ ಮತ್ತೊಂದು ತವರು ಎಂದು ಕರೆದಿರುವ ವಿಜಯ್ ಮಲ್ಯ, 1992ರಿ೦ದ ಅನಿರ್ಧಿಷ್ಟವಾಗಿ ನಾನು ಇ೦ಗ್ಲೆ೦ಡ್‍ನಲ್ಲಿ ವಾಸವಾಗಿದ್ದೇನೆ. ಇದರಿ೦ದ ನಾನು ಈ ದೇಶಕ್ಕೆ ತು೦ಬಾ ಹತ್ತಿರವಾಗಿದ್ದೇನೆ. ಇ೦ಗ್ಲೆ೦ಡ್ ನನಗೆ ಕುಟು೦ಬವಿದ್ದ೦ತಿದ್ದು, ಇಲ್ಲಿ ನಾನು ವಾರದಲ್ಲಿ ಆರು ದಿನ ಕೆಲಸ ಮಾಡುತ್ತೇನೆ. ಹೀಗಾಗಿ ನನ್ನ ದೇಹದ ತೂಕದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದ್ದು, ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.
ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಮಲ್ಯ ವಿರುದ್ಧ ಜಾರಿ ನಿದೇ೯ಶನಾಲಯ ನೋಟಿಸ್ ಜಾರಿ ಮಾಡಿದ್ದು ಮಾಚ್‍೯ ತಿ೦ಗಳಲ್ಲಿ ಮಲ್ಯ ಲ೦ಡನ್‍ಗೆ ತೆರಳಿದ್ದರು. ಇನ್ನು ಮಲ್ಯ ಒಡೆತನದ ಫೋರ್ಸ್ ಇಂಡಿಯಾ ತಂಡ ಕೂಡ ಮೊನಾಕೋ ಎಫ್ 1 ರೇಸ್ ನಲ್ಲಿ ಪ್ರಮುಖ ಸ್ಪರ್ಧಿಯಾಗಿದ್ದು, ಒಟ್ಟಾರೆ ಫೋರ್ಸ್ ಇಂಡಿಯಾ 52 ಅಂಕಗಳನ್ನು ಗಳಿಸಿದೆ.
Advertisement