
ಇಸ್ಲಾಮಾಬಾದ್: ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಕುಖ್ಯಾತ ಉಗ್ರ ಹಾಗೂ ಜಮಾತ್ ಉದ್ ದವಾ ಉಗ್ರ ಸಂಘಟನೆ ಸಂಸ್ಥಾಪಕ ಹಫೀಜ್ ಸಯ್ಯೀದ್ ಪ್ರತೀಕಾರದ ಎಚ್ಚರಿಕೆ ನೀಡಿದ್ದಾನೆ.
ಭಾನುವಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಫೀಜ್ ಸಯ್ಯೀದ್, ಒಬ್ಬ ವಾನಿ ಹತ್ಯೆ ಭಾರತದಲ್ಲಿ ಹತ್ತಾರು ಬುರ್ಹಾನ್ ವಾನಿ ಪ್ರತಿಭಟನೆಗೆ ಕಾರಣವಾಗುತ್ತದೆ. ಕಾಶ್ಮೀರಿಗಳು ಸ್ವಾತಂತ್ರ್ಯ ಪ್ರಿಯರಾಗಿದ್ದು, ತಮ್ಮ ಸ್ವಾತಂತ್ರ್ಯಕ್ಕಾಗಿ ಎಂತಹುದೇ ಸನ್ನಿವೇಶವನ್ನು ಎದುರಿಸಲು ಸಿದ್ಧರಿರುತ್ತಾರೆ. "ಹುತಾತ್ಮ ಬುರ್ಹಾನ್ ವಾನಿ" ಆತ್ಮಕ್ಕೆ ಶಾಂತಿ ಸಿಗಲಿ, ಕಾಶ್ಮೀರದಲ್ಲಿ ಜಿಹಾದ್ ಪಡೆಗಳಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾನೆ.
ಸಂಪೂರ್ಣ ಉರ್ದುಮಯವಾಗಿದ್ದ ಸಯ್ಯೀದ್ ಭಾಷಣದ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ಮುಂದುವರೆದ ಕರ್ಫ್ಯೂ
ಕಾಶ್ಮೀರದಲ್ಲಿ ಶನಿವಾರದಿ೦ದ ನಡೆಯುತ್ತಿರುವ ಗಲಭೆ ಸೋಮವಾರವೂ ಮು೦ದುವರಿದಿದ್ದು, ಮೃತರ ಸ೦ಖ್ಯೆ 32ಕ್ಕೇರಿದೆ. ಎಲ್ಲ 10 ಜಿಲ್ಲೆಗಳಲ್ಲಿಯೂ ಕರ್ಫ್ಯೂ ಹೇರಲಾಗಿದ್ದು, ಜನಜೀವನ ಸ೦ಪೂಣ೯ ಅಸ್ತವ್ಯಸ್ಥಗೊ೦ಡಿದೆ. 1990ರಲ್ಲಿನ ಕರ್ಫ್ಯೂ ಸನ್ನಿವೇಶದ ನೆನಪಾಗುತ್ತಿದೆ ಎ೦ದು ಕಾಶ್ಮೀರ ನಿವಾಸಿಗಳು ಹೇಳುತ್ತಿದ್ದಾರೆ.
Advertisement