
ಚಂಡೀಗಢ: ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮಾನ್ ಅವರು ಮದ್ಯಪಾನ ಮಾಡಿ ಸಂಸತ್ತಿಗೆ ಬಂದಿದ್ದರು ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ.
ನಿನ್ನೆ ನಡೆದ ಅಧಿವೇಶನದ ವೇಳೆ ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮಾನ್ ಅವರು ಕುಡಿದು ಸಂಸತ್ತಿಗೆ ಬಂದಿದ್ದರು ಎಂದು ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಮಾಜಿ ಮುಖ್ಯಂತ್ರಿ ಕ್ಯಾಪ್ಟೆನ್ ಅಮರೀಂದರ್ ಸಿಂಗ್ ಅವರು ಆರೋಪ ಮಾಡಿದ್ದಾರೆ.
ಭಗವಂತ್ ಮಾನ್ ನಂತಹ ಪ್ರತಿನಿಧಿಗಳಿಂದ ಪಂಜಾಬ್ ನ ವರ್ಚಸ್ಸಿನ ಕುರಿತು ಅಪಪ್ರಚಾರವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿಂದೆ ಕೂಡ ಉಚ್ಛಾಟಿತ ಆಪ್ ಪಕ್ಷದ ನಾಯಕ ಯೋಗೇಂದ್ರ ಯಾದವ್ ಅವರು ಕೂಡ ಭಗವಂತ್ ಮಾನ್ ವಿರುದ್ಧ ಕಿಡಿಕಾರಿದ್ದರು. ಸಂಸದ ಭಗವಂತ್ ಮಾನ್ ಅವರು, ಲೋಕಸಭಾ ಅಧಿವೇಶನದ ವೇಳೆ ಪಾನಮತ್ತರಾಗಿ ಬಂದಿದ್ದರು ಎಂದು ಹೇಳಿದ್ದರು.
2014ರ ಜುಲೈ 1ರಂದು ಆಮ್ ಆದ್ಮಿ ಪಕ್ಷ ಲೋಕಸಭೆಯಲ್ಲಿರುವ ತನ್ನ ಎಲ್ಲಾ ಅಭ್ಯರ್ಥಿಗಳನ್ನು ಕೂಗಿ ಸಭೆಯೊಂದನ್ನು ಏರ್ಪಡಿಸಿತ್ತು. ನನ್ನ ಪಕ್ಕದಲ್ಲೇ ಭಗವಂತ್ ಮಾನ್ ಅವರು ಕುಳಿತುಕೊಂಡಿದ್ದರು. ಈ ವೇಳೆ ಅವರು ಮದ್ಯಪಾನ ಮಾಡಿರುವ ವಾಸನೆ ನನಗೆ ಬರುತ್ತಿತ್ತು ಎಂದು ಯೋಗೇಂದ್ರ ಯಾದವ್ ಅವರು ಆರೋಪಿಸಿದ್ದರು.
Advertisement