
ಮುಜಾಫರ್ ನಗರ: ಸ್ವಯಂ ಘೋಷಿತ ದೇವಮಾನವ ಅಸರಾಂ ಬಾಪೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿದಾರನಿಗೆ ಗುಂಡಿಟ್ಟು ಹತ್ಯೆ ಮಾಡಿದ ಆರೋಪಿ ಕಾರ್ತಿಕ್ ಹಾಲ್ದರ್ ನನ್ನು ಬಂಧಿಸುವಲ್ಲಿ ಗುಜರಾತ್ ಪೊಲೀಸರು ವಿಫಲವಾಗಿರುವುದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಅಸರಾಂ ಬಾಪು ಪ್ರಕರಣ ಕುರಿತಂತೆ ಇಂದು ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಗರಿಮಾ ಚೌಧರಿ ಅವರು, ಪ್ರಕರಣದಲ್ಲಿ ಕಾರ್ತಿಕ್ ಹಲ್ದಾರ್ ವಿಚಾರಣೆ ನಡೆಸುವುದು ಅಗತ್ಯವಿದ್ದು, ಶೀಘ್ರಗತಿಯಲ್ಲಿ ಕಾರ್ತಿಕ್ ಹಲ್ದಾರ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಗುಜರಾತ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಸರಾಂ ಬಾಪು ಅವರನ್ನು ಬಂಧಿಸಲಾಗಿತ್ತು. ಅಖಿಲ್ ಗುಪ್ತಾ ಎಂಬುವವರು ಬಾಪು ಅವರ ಬಳಿ ಅಡುಗೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದರು. ಇವರನ್ನು ಪ್ರಕರಣದ ಪ್ರಮುಖ ಸಾಕ್ಷಿದಾರ ಎಂದು ಹೇಳಲಾಗುತ್ತಿತ್ತು. ಜನವರಿ 11 ರಂದು ಅಖಿಲ್ ಗುಪ್ತಾರಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.
Advertisement