ಸ್ವಾತಿ ಕೊಲೆಗೈದ ಆರೋಪಿಗೆ ತಂದೆ ಕೇಳಿದ ಏಕೈಕ ಪ್ರಶ್ನೆ ಏನು ಗೊತ್ತೆ?

ನನ್ನ ಮಗಳಿಗೇಕೆ ಹೀಗೆ ಮಾಡಿದೆ? ನನ್ನ ಮಗಳನ್ನು ಕೊಲೆ ಮಾಡಿದೆ. ಇದೀಗ ನಾನು ಜೈಲಿನ ಒಳಗೆ ಬಂದು ಈ ರೀತಿಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ಮೃತ ಸ್ವಾತಿ ತಂದೆ ಆರೋಪಿಯನ್ನು...
ಬಂಧಿತ ಆರೋಪಿ ರಾಮ್ ಕುಮಾರ್ ಹಾಗೂ ಕೊಲೆಯಾದ ಸ್ವಾತಿ
ಬಂಧಿತ ಆರೋಪಿ ರಾಮ್ ಕುಮಾರ್ ಹಾಗೂ ಕೊಲೆಯಾದ ಸ್ವಾತಿ

ಚೆನ್ನೈ: ನನ್ನ ಮಗಳಿಗೇಕೆ ಹೀಗೆ ಮಾಡಿದೆ? ನನ್ನ ಮಗಳನ್ನು ಕೊಲೆ ಮಾಡಿದೆ. ಇದೀಗ ನಾನು ಜೈಲಿನ ಒಳಗೆ ಬಂದು ಈ ರೀತಿಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ಮೃತ ಸ್ವಾತಿ ತಂದೆ ಆರೋಪಿಯನ್ನು ಹಿಡಿದು ಕಣ್ಣೀರಿಟ್ಟಿದ್ದಾರೆ.

ಇನ್ಫೋಸಿಸ್ ಉದ್ಯೋಗಿ ಸ್ವಾತಿ ಕೊಲೆ ಪ್ರಕರಣದ ಆರೋಪಿಯ ಗುರುತು ಪತ್ತೆಗೆ ನಿನ್ನೆ ಕಾರಾಗೃಹದಲ್ಲಿ ಪರೇಡ್ ನಡೆಸಲಾಗಿತ್ತು. ನುಂಗಬಾಕಂ ರೈಲ್ವೆ ನಿಲ್ದಾಣದಲ್ಲಿ ಪುಸ್ತಕ ಅಂಗಡಿ ನಡೆಸುತ್ತಿದ್ದ ಶಿವಕುಮಾರ್ ಎಂಬ ವ್ಯಕ್ತಿ ಪ್ರಕರಣದ ಪ್ರತ್ಯಕ್ಷ ದರ್ಶಿಯಾಗಿದ್ದಾರೆ. ಜೂನ್ 24 ರಂದು ನಡೆದ ಸ್ವಾತಿ ಕೊಲೆಯ ಸಾಕ್ಷಿಯನ್ನಾಗಿ ಪೊಲೀಸರು ಇವರನ್ನು ಪರಿಗಣಿಸಿದ್ದು, ನಿನ್ನೆ ಬೆಳಗ್ಗೆ ಗುರುತು ಪತ್ತೆ ಹಚ್ಚುವ ಕೆಲಸ ನಡೆಸಲಾಗಿತ್ತು. ಗುರುತು ಪತ್ತೆ ವೇಳೆ ಸ್ವಾತಿ ತಂದೆ ಸಂತನ ಗೋಪಾಲಕೃಷ್ಣನ್ ಅವರೂ ಕೂಡ ಹಾಜರಿದ್ದರು.

ಪರೇಡ್ ವೇಳೆ ಆರೋಪಿ ರಾಮ್ ಕುಮಾರ್ ಸೇರಿದಂತೆ 25 ಮಂದಿಯನ್ನೂ ಸಾಲಾಗಿ ನಿಲ್ಲಿಸಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಪರೇಡ್ ನಡೆಸಲಾಗಿತ್ತು. ಇದರಂತೆ ಸ್ವಾತಿ ತಂದೆ ಸಂತನಾ ಮತ್ತು ಶಿವಕುಮಾರ್ ಅವರು ಗುರುತು ಪತ್ತೆ ಹಚ್ಚಿದ್ದರು.

ಎಷ್ಟು ಬಾರಿ ಪರೀಕ್ಷೆ ನಡೆಸಿದರೂ ರಾಮ್ ಕುಮಾರ್ ನನ್ನೇ ಆರೋಪಿ ಎಂದು ಸ್ವಾತಿ ತಂದೆ ಹಾಗೂ ಶಿವಕುಮಾರ್ ಅವರು ಗುರ್ತಿಸುತ್ತಿದ್ದರು. ಪತ್ತೆ ಹಚ್ಚುವ ವೇಳೆ ರಾಮ್ ಕುಮಾರ್ ಬಳಿ ಬಂದ ಸ್ವಾತಿ ತಂದೆ ಸಂತನಾ ಅವರು, ಇದ್ದಕ್ಕಿದ್ದಂತೆ ಭಾವುಕರಾಗಿ ಆತನ ಕತ್ತಿನ ಪಟ್ಟಿಯನ್ನು ಹಿಡಿದು ನನ್ನ ಮಗಳಿಗೇಕೆ ಹೀಗೆ ಮಾಡಿದೆ? ಎಂದು ಕೇಳಿದ್ದಾರೆ. ನೀನು ನನ್ನ ಮಗಳನ್ನು ಕೊಲೆ ಮಾಡಿದೆ. ಇದೀಗ ನಾನು ಜೈಲಿನಲ್ಲಿ ಬಂದು ಈ ರೀತಿಯ ಕೆಲಸಗಳನ್ನು ಮಾಡುವಂತಾಗಿದೆ ಎಂದು ಕಣ್ಣೀರಿಟ್ಟಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com