ದಾದ್ರಿ ಪ್ರಕರಣ: ಅಖ್ಲಾಕ್ ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಆದೇಶ

ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ದಾದ್ರಿ ಹತ್ಯೆ ಪ್ರಕರಣ ಸಂಬಂಧ ಮೃತ ಮೊಹಮ್ಮದ್ ಅಖ್ಲಾಕ್ ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ನ್ಯಾಯಾಲಯದ...
ಮೃತ ಮೊಹಮ್ಮದ್ ಅಖ್ಲಾಕ್ ಸಂಬಂಧಿಕರು ರೋಧಿಸುತ್ತಿರುವುದು
ಮೃತ ಮೊಹಮ್ಮದ್ ಅಖ್ಲಾಕ್ ಸಂಬಂಧಿಕರು ರೋಧಿಸುತ್ತಿರುವುದು

ನೊಯ್ಡಾ: ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ದಾದ್ರಿ ಹತ್ಯೆ ಪ್ರಕರಣ ಸಂಬಂಧ ಮೃತ ಮೊಹಮ್ಮದ್ ಅಖ್ಲಾಕ್ ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ನ್ಯಾಯಾಲಯದ ಗುರುವಾರ ಸೂಚನೆ ನೀಡಿದೆ.  

ಗೋಮಾಂಸ ಸೇವನೆ ವದಂತಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ದಾದ್ರಿಯ ಮುಸ್ಲಿಂ ವ್ಯಕ್ತಿ ಅಖ್ಲಾಕ್ ಎಂಬುವವರನ್ನು ಗುಂಪೊಂದು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಹೊಡೆದು ಸಾಯಿಸಿದ್ದರು. ಈ ಘಟನೆ ದೇಶದಾದ್ಯಂತ ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತ್ತು.

ಸಾಕಷ್ಟು ಬೆಳವಣಿಗೆಗಳ ನಂತರ ಮಥುರಾ ವಿಧಿವಿಜ್ಞಾನ ಪ್ರಯೋಗಾಲಯ ವರದಿಯನ್ನು ಬಹಿರಂಗ ಪಡಿಸಿತ್ತು. ಅಖ್ಲಾಕ್ ಮನೆಯಲ್ಲಿ ಇರಿಸಲಾಗಿದ್ದು ಗೋಮಾಂಸವೇ ಎಂದು ಹೇಳಿತ್ತು. ವರದಿ ನಂತರ ಕೂಡ ಪೊಲೀಸರು ಅಖ್ಲಾಕ್ ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು.

ಇದರಂತೆ ಅಖ್ಲಾಕ್ ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡುವಂತೆ ಕೋರಿ ನೊಯ್ಡಾದ ನ್ಯಾಯಾಲಯದಲ್ಲಿ ವ್ಯಕ್ತಿಯೊಬ್ಬರು ಅರ್ಜಿಯೊಂದನ್ನು ಸಲ್ಲಿಸಿದ್ದರು.

ಅರ್ಜಿಯಲ್ಲಿ, ಬಿಸಾಡ ಗ್ರಾಮದ ರನ್ವೀರ್ ಮತ್ತು ಜತನ್ ಎಂಬುವವರು ಅಖ್ಲಾಕ್ ಮಗ ಗೋವನ್ನು ಹೊಡೆಯುತ್ತಿರುವುದನ್ನು ಕಳೆದ ವರ್ಷ ಸೆಪ್ಟೆಂಬರ್ 29 ರಂದು ನೋಡಿದ್ದರು. ಪ್ರಶ್ನಿಸಲು ಹೋದಾಗ, ಹಸು ಜನರ ಮೇಲೆ ದಾಳಿ ಮಾಡುತ್ತಿತ್ತು. ಹೀಗಾಗಿ ಜಾನ್ ಮೊಹಮ್ಮದ್ ಮನೆಯೊಳಗೆ ಕಟ್ಟಿಹಾಕಲು ಯತ್ನಿಸುತ್ತಿದ್ದ ಎಂದು ಅಖ್ಲಾಕ್ ಹೇಳಿದ್ದರು.

ಗ್ರಾಮದ ಮತ್ತೊಬ್ಬ ವ್ಯಕ್ತಿ ಪ್ರೇಮ್ ಸಿಂಗ್ ಎಂಬುವವರು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅಖ್ಲಾಕ್ ಮನೆಯಲ್ಲಿ ಹಸುವನ್ನು ಸಾಯಿಸುತ್ತಿರುವುದನ್ನು ನೋಡಿದ್ದ. ಇದರಂತೆ ಹಸುವನ್ನು ಕೊಂದ ದಿನ ಅಖ್ಲಾಕ್ ನನ್ನು ಕೆಲಸ ಸ್ಥಳೀಯರು ಹಿಡಿದುಕೊಂಡಿದ್ದರು. ನಂತರ ಮನೆಗೆ ನುಗ್ಗಿ ನೋಡಿದಾಗ ಗೋಮಾಂಸ ಇರುವುದು ಕಂಡಬಂದಿತ್ತು.  ಈ ವೇಳೆ ತೀವ್ರವಾಗಿ ಕೆಂಡಾಮಂಡಲವಾದ ಸ್ಥಳೀಯರು ಅಖ್ಲಾಕ್ ಗೆ ಹೊಡೆದಿದ್ದರು ಎಂದು ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ಇದಕ್ಕೆ ಸಂಬಂಧಿಸಿದಂತೆ ಮಥುರಾ ಪ್ರಯೋಗಾಲಯದ ವರದಿಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ.

ಈ ಅರ್ಜಿಯನ್ನು ಪರಿಶೀಲಿಸಿದ್ದ ನ್ಯಾಯಾಲಯವು ಇಂದು ವಿಚಾರಣೆ ನಡೆಸಿದ್ದು, ಅಖ್ಲಾಕ್ ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com