ಗಂಗಾ ನದಿಯನ್ನು ಮಲಿನಗೊಳಿಸುವವರಿಗೆ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಕೇಂದ್ರದ ಚಿಂತನೆ

ಗಂಗಾ ನದಿಯನ್ನು ಮಲಿನಗೊಳಿಸುವವರಿಗೆ ಶಿಕ್ಷೆ ವಿಧಿಸಲು ಸರ್ಕಾರ ಶೀಘ್ರವೇ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ತಿಳಿಸಿದ್ದಾರೆ.
ಸಚಿವೆ ಉಮಾಭಾರತಿ
ಸಚಿವೆ ಉಮಾಭಾರತಿ

ನವದೆಹಲಿ: ಗಂಗಾ ನದಿಯನ್ನು ಮಲಿನಗೊಳಿಸುವವರಿಗೆ ಶಿಕ್ಷೆ ವಿಧಿಸಲು ಸರ್ಕಾರ ಶೀಘ್ರವೇ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ತಿಳಿಸಿದ್ದಾರೆ.

ನದಿ ಮಲಿನಗೊಳ್ಳಲು ಕಾರಣವಾಗಿರುವ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಉಮಾಭಾರತಿ, ಗಂಗಾ ನದಿ ದಡದಲ್ಲಿ 764 ಕೈಗಾರಿಕೆಗಳಿದ್ದು ಇವುಗಳಿಂದ ಗಂಗಾ ನದಿ ಮಲಿನಗೊಳ್ಳುತ್ತಿದೆ. ಈ ಪೈಕಿ ಕೆಲವು ಕೈಗಾರಿಕೆಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು ನದಿಯನ್ನು ಮಲಿನಗೊಳಿಸುವವರ ವಿರುದ್ಧ ಮತ್ತಷ್ಟುಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.  ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿದ ನಂತರ ಈ ಕಾನೂನು ಜಾರಿ ಮಾಡುವ ಪ್ರಸ್ತಾವನೆ ನೀಡಲಾಗುತ್ತದೆ ಎಂದು ಉಮಾಭಾರತಿ ಹೇಳಿದ್ದಾರೆ. ಗಂಗಾ ನದಿ ಎಂದಿಗೂ ಪವಿತ್ರ ನದಿಯೇ ಆಗಿದ್ದು, ನದಿಯಲ್ಲಿ ರಾಸಾಯನಿಕ ವಸ್ತುಗಳು ಸೇರಿರುವುದರಿಂದ ಶುದ್ಧವಾಗಿಲ್ಲ ಎಂದು ಉಮಾಭಾರತಿ ರಾಜ್ಯಸಭೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com