ಕಾಶ್ಮೀರದ ನಾಯಕರನ್ನೂ ಭಯೋತ್ಪಾದಕರಂತೆಯೇ ನಡೆಸಿಕೊಳ್ಳಬೇಕಾ?: ಸರ್ಕಾರಕ್ಕೆ ಗುಲಾಂ ನಬಿ ಆಜಾದ್ ಪ್ರಶ್ನೆ

ಕಾಶ್ಮೀರದ ನಾಯಕರನ್ನೂ ಉಗ್ರವಾದಿಗಳನ್ನು ನಡೆಸಿಕೊಂಡಂತೆಯೇ ನಡೆಸಿಕೊಳ್ಳಬೇಕಾ ಎಂದು ಗುಲಾಂ ನಬಿ ಅಜಾದ್,ಪ್ರಶ್ನಿಸಿದ್ದಾರೆ.
ಗುಲಾಂ ನಬಿ ಅಜಾದ್
ಗುಲಾಂ ನಬಿ ಅಜಾದ್

ನವದೆಹಲಿ: ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿರುವ ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಅಜಾದ್, ಕಾಶ್ಮೀರದ ನಾಯಕರನ್ನೂ ಉಗ್ರವಾದಿಗಳನ್ನು ನಡೆಸಿಕೊಂಡಂತೆಯೇ  ನಡೆಸಿಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ.

ಜಮ್ಮು-ಕಾಶ್ಮೀರ ಹಿಂದೆಂದೂ ಇಷ್ಟು ಕೆಟ್ಟ ಪರಿಸ್ಥಿತಿಯನ್ನು ಕಂಡಿರಲಿಲ್ಲ. 2008-9 ರಿಂದ ಕಾಶ್ಮೀರದ ಸ್ಥಿತಿಯೇಕೆ ಹದಗೆಡುತ್ತಿದೆ? ಕಾಶ್ಮೀರದಲ್ಲಿ ನಮ್ಮ ಸರ್ಕಾರ, ಈ ಹಿಂದಿನ ಒಮರ್ ಅಬ್ದುಲ್ಲಾ ಸರ್ಕಾರ, ಮೆಹಬೂಬಾ ಮುಫ್ತಿ ಸರ್ಕಾರಗಳೂ ಪ್ರತಿಭಟನೆಯನ್ನು ಕಂಡಿವೆ. ಆದರೆ  ನಾಗರಿಕರ ಮೇಲೆ ಇಂತಹ ದೌರ್ಜನ್ಯಗಳನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಕಾಶ್ಮೀರದಲ್ಲಿ ಪ್ರತಿಭಟನಾ ನಿರತರ ಮೇಲೆ ಪೆಲೆಟ್‌ ಗನ್‌ ಗಳನ್ನು ಬಳಸಲಾಗಿದೆ, ನಾಗರಿಕರನ್ನು ಭಯೋತ್ಪಾದಕರಂತೆಯೇ ನಡೆಸಿಕೊಳ್ಳಬೇಕಾ ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಪ್ರಶ್ನಿಸಿದ್ದಾರೆ. ಉಗ್ರವಾದವನ್ನು ಕೊನೆಗಾಣಿಸಲು ನಾವು ಸರ್ಕಾರದೊಂದಿಗೆ ಇದ್ದೇವೆ, ಆದರೆ ನಾಗರಿಕರನ್ನು ಭಯೋತ್ಪಾದಕರಂತೆಯೇ ನಡೆಸಿಕೊಳ್ಳುವ ಬಗ್ಗೆ ವಿರೋಧವಿದೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com