
ಅಲಹಾಬಾದ್: ಗೂಗಲ್ ಸರ್ಚ್ ಇಂಜಿನ್ ನಲ್ಲಿ ಟಾಪ್ 10 ಕ್ರಿಮಿನಲ್ ಪಟ್ಟಿಯ ಚಿತ್ರಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರವಿದ್ದದ್ದು ಈಗ ಗೂಗಲ್ ಸಂಸ್ಥೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ನರೇಂದ್ರ ಮೋದಿ ಅವರ ಭಾವಚಿತ್ರಡಿದ್ದ ಪ್ರಕರಣದ ಬಗ್ಗೆ ಅಲಹಾಬಾದ್ ನ್ಯಾಯಾಲಯ ಗೂಗಲ್ ಸಿಇಒ, ಭಾರತದ ಗೂಗಲ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಟಾಪ್ 10 ಕ್ರಿಮಿನಲ್ ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರಿಂದ ಗೂಗಲ್ ಸಂಸ್ಥೆ ಹಾಗೂ ಅದರ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರ್ಟ್ ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಗೂಗಲ್ ಸರ್ಚ್ ನಲ್ಲಿ ಮೋದಿ ಅವರ ಭಾವಚಿತ್ರ ಟಾಪ್ 10 ಕ್ರಿಮಿನಲ್ ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಸುಶೀಲ್ ಕುಮಾರ್ ಮಿಶ್ರಾ ಎಂಬ ವಕೀಲಕರು ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಗೂಗಲ್ ನ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವುದರೊಂದಿಗೆ ಸಂಸ್ಥೆ ವಿರುದ್ಧ ಪ್ರಕರಣದ ದಾಖಲಿಸುವಂತೆ ಸೂಚನೆ ನೀಡಿದ್ದು ಮುಂದಿನ ವಿಚಾರಣೆಯನ್ನು ಆಗಸ್ಟ್ 31 ಕ್ಕೆ ನಿಗದಿ ಪಡಿಸಿದೆ.
Advertisement