ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ(ಸಂಗ್ರಹ ಚಿತ್ರ)
ದೇಶ
ಪೀಟರ್ ಮುಖರ್ಜಿಗೆ ಪಾರ್ಟಿ ಮತ್ತು ಮಹಿಳೆಯರ ಮೇಲೆ ಅಪಾರ ಹುಚ್ಚು: ಶಬ್ನಮ್
ಮಾಜಿ ಮಾಧ್ಯಮ ದೊರೆ ಮತ್ತು ಶೀನಾ ಬೋರಾ ಹತ್ಯೆಯ ಆರೋಪಿ ಪೀಟರ್ ಮುಖರ್ಜಿಗೆ ಯಾವುದೇ ನೈತಿಕತೆ...
ಮುಂಬೈ: ಮಾಜಿ ಮಾಧ್ಯಮ ದೊರೆ ಮತ್ತು ಶೀನಾ ಬೋರಾ ಹತ್ಯೆಯ ಆರೋಪಿ ಪೀಟರ್ ಮುಖರ್ಜಿಗೆ ಯಾವುದೇ ನೈತಿಕತೆ ಇರಲಿಲ್ಲ, ಆತನ ಜೀವನದಲ್ಲಿ ಅನೇಕ ಮಹಿಳೆಯರಿದ್ದರು ಎಂದು ಪೀಟರ್ ಮುಖರ್ಜಿಯ ಮಾಜಿ ಪತ್ನಿ ಶಬ್ನಮ್ ಹೇಳಿದ್ದಾರೆ.
''ಪೀಟರ್ ಗೆ ಯಾವುದೇ ನೈತಿಕತೆ ಇರಲಿಲ್ಲ. ಯಾವಾಗಲೂ ಯುವ ಮಹಿಳೆಯರ ಕಡೆಗೆ ಆಕರ್ಷಿತನಾಗುತ್ತಿದ್ದ. ತಡರಾತ್ರಿಯ ಪಾರ್ಟಿಗಳಿಗೆ ಹೋಗುವುದು ಆತನಿಗೆ ಬಹಳ ಇಷ್ಟವಾಗಿತ್ತು. ಮತ್ತು ಆತನ ಜೀವನದಲ್ಲಿ ಅನೇಕ ಮಹಿಳೆಯರು ಬಂದು ಹೋಗಿದ್ದರು. ಇದೊಂದೇ ಕಾರಣದಿಂದ ನಾನು ಆತನಿಂದ ವೈವಾಹಿಕ ಸಂಬಂಧವನ್ನು ಮುರಿದುಕೊಂಡೆ'' ಎಂದು ಪೀಟರ್ ನ ಮೊದಲ ಪತ್ನಿ ಶಬ್ನಮ್ ತಿಳಿಸಿದ್ದಾರೆ.
ಪೀಟರ್ ಹಾಗೂ ಇಂದ್ರಾಣಿ ಮುಖರ್ಜಿ ಶೀನಾ ಬೋರಾಳನ್ನು ಹತ್ಯೆ ಮಾಡಲು ಪಿತೂರಿ ನಡೆಸಿದ್ದರು ಎಂದು ತನಿಖೆ ನಡೆಸಿ ಹೇಳಿಕೆ ನೀಡಿದ್ದ ಸಿಬಿಐ ನಿನ್ನೆ ಪೀಟರ್ ನ ಮೊದಲ ಪತ್ನಿ ಶಬ್ನಮ್ ನ ಹೇಳಿಕೆಯನ್ನು ಬಹಿರಂಗಪಡಿಸಿದೆ.
ಶಬ್ನಮ್ ನ ಹೇಳಿಕೆಯನ್ನು ಸಿಬಿಐ ರಹಸ್ಯವಾಗಿ ಕಳೆದ ವರ್ಷ ನವೆಂಬರ್ 25ರಂದು ರೆಕಾರ್ಡ್ ಮಾಡಿಕೊಂಡಿತ್ತು. ಆಕೆಯ ಹೇಳಿಕೆಯ ಒಂದು ಭಾಗವನ್ನು ಮಾತ್ರ ಬಹಿರಂಗಪಡಿಸಲಾಗಿದ್ದು, ಇನ್ನೊಂದು ಭಾಗ ಹಾಗೆಯೇ ಇದೆ.
ಶಬ್ಮಮ್ ತಮ್ಮ ಹೇಳಿಕೆಯಲ್ಲಿ, ಪೀಟರ್ ಗೆ ಯುವತಿಯರ ಮೇಲೆ ಅಪಾರ ಒಲವು ಇತ್ತು. ತಡರಾತ್ರಿಯ ಪಾರ್ಟಿಗೆ ಹೋಗುವುದು, ಹಲವು ಮಹಿಳೆಯರ ಜೊತೆ ಸಹವಾಸವೂ ಇತ್ತು. ಇದರಿಂದಾಗಿ ಆತನೊಂದಿಗೆ ಜೀವನ ನಡೆಸಲು ಸಾಧ್ಯವಾಗದೆ ವಿಚ್ಛೇದನ ನೀಡಿದೆ ಎಂದು ಹೇಳಿದ್ದಾರೆ.
ಶಬ್ನಮ್ ಹೇಳಿಕೆ ಜೊತೆಗೆ ಶೀನಾ ಬೋರಾ ಹತ್ಯೆಯ ಎಲ್ಲಾ ಆರೋಪಿಗಳ ಕುರಿತು ಸಿಬಿಐ ಈ ಹಿಂದೆ ಆರೋಪಪಟ್ಟಿ ಸಲ್ಲಿಸಿತ್ತು. ಈ ಹೇಳಿಕೆಯನ್ನೀಗ ರಕ್ಷಣಾ ವಕೀಲರಿಗೆ ನೀಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ