ರಾಹುಲ್ ಗಾಂಧಿ- ವಿಶ್ರಾಂತಿ ಹೇಳಿ ಮಾಡಿಸಿದ ಜೋಡಿ: ಬಿಜೆಪಿ

ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಸಂಸದ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿದ್ದೆಗೆ ಜಾರಿದ್ದನ್ನು ಟೀಕಿಸಿರುವ ಬಿಜೆಪಿ, ರಾಹುಲ್ ಗಾಂಧಿ ಹಾಗೂ ವಿಶ್ರಾಂತಿ ಹೇಳಿ ಮಾಡಿಸಿರುವ ಜೋಡಿ ಎಂದು ವ್ಯಂಗ್ಯವಾಡಿದೆ.
ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ನಿದ್ದೆಗೆ ಜಾರಿದ ರಾಹುಲ್ ಗಾಂಧಿ
ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ನಿದ್ದೆಗೆ ಜಾರಿದ ರಾಹುಲ್ ಗಾಂಧಿ

ನವದೆಹಲಿ: ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಸಂಸದ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿದ್ದೆಗೆ ಜಾರಿದ್ದನ್ನು ಟೀಕಿಸಿರುವ ಬಿಜೆಪಿ, ರಾಹುಲ್ ಗಾಂಧಿ ಹಾಗೂ ವಿಶ್ರಾಂತಿ ಹೇಳಿ ಮಾಡಿಸಿರುವ ಜೋಡಿ ಎಂದು ವ್ಯಂಗ್ಯವಾಡಿದೆ.

ರಾಹುಲ್ ಗಾಂಧಿಗೆ ಜವಾಬ್ದಾರಿ ಹೊಂದುವುದಿಲ್ಲ. ರಾಹುಲ್ ಗಾಂಧಿ ಹಾಗೂ ವಿಶ್ರಾಂತಿ ಹೇಳಿ ಮಾಡಿಸಿದ ಜೋಡಿಯಾಗಿದ್ದು ದೇಶ ಅವರನ್ನು ಸ್ಲೀಪಿಂಗ್ ಪ್ರಿನ್ಸ್ ಎಂದು ಹೇಳುತ್ತಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.    
ಒಂದು ವೇಳೆ ಕಾಂಗ್ರೆಸ್ 70 ವರ್ಷದಿಂದ ಮಲಗದೆ ಎಚ್ಚರಿಕೆಯಿಂದ ಇದ್ದಿದ್ದರೆ ರಾಹುಲ್ ಗಾಂಧಿಗೆ ರಾಜಕೀಯ ಪ್ರವಾಸ ಅಗತ್ಯವಿರುತ್ತಿರಲಿಲ್ಲ ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ.

ಇನ್ನು ದೇಶದಲ್ಲಿ ಎರಡು ಭಿನ್ನ ಚಿಂತನೆಗಳಿದ್ದು ಮಹಾತ್ಮಾ ಗಾಂಧಿ, ಸರ್ದಾರ್ ಪಟೇಲ್, ನೆಹರು ಅಂಬೇಡ್ಕರ್ ಚಿಂತನೆಗಳು ಒಂದೆಡೆಯಾದರೆ ಮತ್ತೊಂದೆಡೆ, ಆರ್ ಎಸ್ ಎಸ್ ನ ಗೋಳವಲ್ಕರ್, ನರೇಂದ್ರ ಮೋದಿ ಅವರಂತಹ ಚಿಂತನೆಗಳು ಮತ್ತೊಂದೆಡೆ ಎಂದು ಹೇಳಿದ್ದ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಅಂಬೇಡ್ಕರ್ ಹಾಗೂ ನೆಹರು ಚಿಂತನೆಗಳು ಪರಸ್ಪರ ಭಿನ್ನವಾಗಿದ್ದವು ಹಾಗೂ ಹಾಗೆಯೇ  ನೆಹರು ಮತ್ತು ಸರ್ದಾರ್ ಪಟೇಲ್ ಅವರ ಚಿಂತನೆಗಳೂ ಭಿನ್ನವಾಗಿದ್ದವು ಎಂಬುದು ಬಹುಶಃ ರಾಹುಲ್ ಗಾಂಧಿಗೆ ತಿಳಿದಿಲ್ಲ, ಇನ್ನು ದಲಿತರ ದೌರ್ಜನ್ಯದ ವಿಷಯದಲ್ಲಿ ಬಿಜೆಪಿಯನ್ನು ದುರುತ್ತಿರುವ ಕಾಂಗ್ರೆಸ್ ದಲಿತ ವಿರೋಧಿಯಾಗಿದ್ದು ಅವರ ಆಡಳಿತಾವಧಿಯಲ್ಲಿ ಬಿ ಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಿಲ್ಲ ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com